ಮೈಸೂರು: ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಹೇಳಿಕೆ
ವಿರುದ್ಧ ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ.

ನಗರದ ಅಗ್ರಹಾರದ ಪದ್ಮಾ ಚಿತ್ರಮಂದಿರದ ಮುಂಭಾಗ ಪಾತಿ ಫೌಂಡೇಶನ್ ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ಕನ್ನಡ ವಿರೋಧಿ ಕಮಲಹಾಸನ್ ವಿರುದ್ಧ
ಪ್ರತಿಭಟಿಸಿ ಕಮಲ ಹಾಸನ್ ಭಾವಚಿತ್ರ ಸುಟ್ಟು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ನಗರಪಾಲಿಕೆ ಮಾಜಿ ಸದಸ್ಯಎಂ ಡಿ ಪಾರ್ಥಸಾರಥಿ,
ಕಮಲ್ ಹಸನ್ ಹೇಳಿಕೆ
ಅವಿವೇಕದಿಂದ ಕೂಡಿದ್ದು, ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಮಲ್ ಹಸನ್ ಕನ್ನಡಿಗರ ಕ್ಷಮೆ ಕೇಳಬೇಕು ಮತ್ತು ತಮ್ಮ ಹೇಳಿಕೆಯನ್ನು ವಾಪಸು ಪಡೆಯಬೇಕು ಇಲ್ಲದಿದ್ದಲ್ಲಿ ಅವರ ಸಿನಿಮಾಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಎಂ ಡಿ ಪಾರ್ಥಸಾರಥಿ ಹೆಳಿದರು.

ಕರ್ನಾಟಕದಿಂದಲೇ ಚಿತ್ರರಂಗದ ಜೀವನ ಆರಂಭಿಸಿ ಇಲ್ಲಿಂದಲೇ ಬೆಳೆದು ಹೋಗಿ ಕೊನೆಗೆ ಕನ್ನಡ ಭಾಷೆಯ ಬಗ್ಗೆ ಹೇಳಿಕೆ ನೀಡಿ ರಾಜಕೀಯ ಮಾಡುತ್ತಿರುವ ಕಮಲ್ ಹಸನ್‌ಗೆ ಕನ್ನಡಿಗರು ತಕ್ಕಪಾಠ ಕಲಿಸಲಿದ್ದಾರೆ. ಆತನ ಎಲ್ಲ ಸಿನಿಮಾಗಳನ್ನು ಸರ್ಕಾರ ಬಿಡುಗಡೆ ಮಾಡದಂತೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಮತ್ತೊಬ್ಬ ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್ ಮಾತನಾಡಿ,
ಕನ್ನಡ ವಿರೋಧಿ ಕಮಲಹಾಸನ್ ಥಗ್ ಲೈಫ್
ಸಿನಿಮಾವನ್ನು ರಾಜ್ಯದಲ್ಲಿ ಕಡ್ಡಾಯವಾಗಿ ನಿಷೇಧಿಸಬೇಕು ಇಲ್ಲವಾದಲ್ಲಿ ಪ್ರದರ್ಶನ ನೀಡುವ ಚಿತ್ರಮಂದಿರಕ್ಕೆ ತೆರಳಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,ಕೆ.ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,ಜಿ ರಾಘವೇಂದ್ರ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಎಸ್ ಎನ್ ರಾಜೇಶ್, ಕೃಷ್ಣಪ್ಪ (ಗಂಟಯ್ಯ),ರಾಕೇಶ್, ಮಂಜುನಾಥ್, ರವಿಚಂದ್ರ,ಸುಚೇಂದ್ರ, ಅಭಿ, ಹರೀಶ್ ನಾಯ್ಡು,ಮಹಾದೇವ್, ಬಸವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.