https://varshininews.co.in Sat, 03 Oct 2026 16:18:55 +0000 en-US hourly 1 https://wordpress.org/?v=7.1.2 ಪಡಿತರ ಅಕ್ಕಿಗಾಗಿ ಬೇರೆ ಊರಿಗೆ ಹೋಗುವುದು ಖಂಡಿಸಿ ಪ್ರತಿಭಟನೆ https://varshininews.co.in/hunasuru-kolaghatta-protest/?utm_source=rss&utm_medium=rss&utm_campaign=hunasuru-kolaghatta-protest Sat, 03 Oct 2026 16:18:49 +0000 https://varshininews.co.in/?p=37239 ಎರಡು ವರ್ಷಗಳಿಂದಲೂ ಪಡಿತರ ಅಕ್ಕಿಗಾಗಿ ಬೇರೆ ಊರಿಗೆ ಹೋಗಿ ತರಬೇಕಾದ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿ ದಲಿತ ಕುಟುಂಬಗಳು ಶನಿವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

The post ಪಡಿತರ ಅಕ್ಕಿಗಾಗಿ ಬೇರೆ ಊರಿಗೆ ಹೋಗುವುದು ಖಂಡಿಸಿ ಪ್ರತಿಭಟನೆ first appeared on .

]]>

ಹುಣಸೂರು: ಎರಡು ವರ್ಷಗಳಿಂದಲೂ ಪಡಿತರ ಅಕ್ಕಿಗಾಗಿ ಬೇರೆ ಊರಿಗೆ ಹೋಗಿ ತರಬೇಕಾದ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿ ದಲಿತ ಕುಟುಂಬಗಳು ಶನಿವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ‌ ವೇಳೆ ಮಾತನಾಡಿದ ಮುಖಂಡ ನಾಗರಾಜ ಕೊಳಘಟ್ಟ ನಮ್ಮ ಕೊಳಘಟ್ಟದ ಜನತೆ ಪಡಿತರ ತರಲು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಂತರ ಪುಡ್ ಇನ್ಸ್‌ಪೆಕ್ಟರ್ ಸುರೇಶ್ ಇಲ್ಲದ ಕಾರಣ‌ಅವರೊಂದಿಗೆ ಫೋನಿನಲ್ಲಿ ಮಾತನಾಡಿ ಸಮಸ್ಯೆ‌ ಬಗೆಹರಿಸವಂತೆ ಮನವಿ ಮಾಡಿದರು.

ಈ ವೇಳಡ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ ಅವರು, ಕೊಳಘಟ್ಟದಲ್ಲಿ ಸುಮಾರು 200 ಮಂದಿ ದಲಿತ ಕುಟುಂಬಗಳು ವಾಸವಾಗಿದ್ದು ಸರಕಾರದಿಂದ ಉಚಿತವಾಗಿ ನೀಡುವ ಪಡಿತರ ಅಕ್ಕಿ ಪಡೆಯಲು ಹರಸಹಾಸ ಪಡಬೇಕಿದೆ ಎಂದು ಹೇಳಿದರು ‌

ಹಲವಾರು ವರ್ಷಗಳಿಂದ ನಮ್ಮಲ್ಲೇ ಪಡಿತರ ವಿತರಿಸಿ ಎಂದು ಮನವಿ ಮಾಡುತ್ತಲೇ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಸ್ವಂದಿಸಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದಾಗಿ ನಮ್ಮೂರಿನ ಜನತೆ ಹೈರಾಣರಾಗಿದ್ದಾರೆ, ಪಡಿತರ ಪಡೆಯಲು, ಹೆಬ್ಬೆಟ್ಟು ನೀಡಲು ಪ್ರತಿ ತಿಂಗಳು. ಮಹಿಳೆಯರು, ವೃದ್ದರು ಕುಪ್ಪೆಗೆ ಹೈವೆ ರಸ್ತೆ ದಾಟಿ ಹೋಗಬೇಕಿದೆ, ಹಲವು ಬಾರಿ ಮಹಿಳೆಯರಿಗೆ ಅಪಘಾತವಾಗಿದೆ ಎಂದು ತಿಳಿಸಿದರು.

ಈಗ ಮತ್ತೆ ಮನೆ ಮಂದಿಯಲ್ಲ ಕೆವೈಸಿ ಮಾಡಿಸ ಬೇಕಿರುವುದರಿಂದ 200 ಕುಟುಂಬಗಳು ಕುಪ್ಪೆಗೆ ಹೋಗಿ ಬರಲು ಸಮಸ್ಯೆಯಾಗಿದೆ, ಇಲ್ಲೆ ಕೆವೈಸಿಗೆ ಅವಕಾಶ ಮಾಡಿಕೊಡಬೇಕು, ಪಡಿತರ ದಿನಸಿ ನಮ್ಮೂರಿನಲ್ಲೇ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು.

ಶೀಘ್ರದಲ್ಲೇ ಸಮಸ್ಯೆ ಬಗ್ಗೆಹರಿಸದಿದ್ದರೆ ಇಡೀ ಊರೆ ಬಂದು ತಾಲ್ಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹವನ್ನು
ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ದೊ.ಯ ಮುತ್ತು,ಚಿಕ್ಕ ಯಜಮಾನ ಕಾಂತರಾಜು,ಕೆ.ಬಿ.ರಾಜು, ಮಾ.ಗ್ರ.ಪಂ ಸದಸ್ಯ ಬಸವಯ್ಯ, ವಾಸು, ರಾಮಯ್ಯ, ರಾಜು, ಚಿಕ್ಕನಂಜಯ್ಯ, ಗೌರಮ್ಮ, ಪುಷ್ಪ, ಸವಿತಾ, ಸುಂದರ್ ರಾಜು, ಕುಮಾರ, ಸಿಂಗಯ್ಯ, ಸಿದ್ದು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

The post ಪಡಿತರ ಅಕ್ಕಿಗಾಗಿ ಬೇರೆ ಊರಿಗೆ ಹೋಗುವುದು ಖಂಡಿಸಿ ಪ್ರತಿಭಟನೆ first appeared on .

]]>
ಕಟ್ಟೆಮಳಲವಾಡಿ ಟೈಲರಿಂಗ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಟ ಚೇತನ್ https://varshininews.co.in/actor-chetan-ahimsa-visit/?utm_source=rss&utm_medium=rss&utm_campaign=actor-chetan-ahimsa-visit Sat, 03 Oct 2026 13:54:29 +0000 https://varshininews.co.in/?p=37236 ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮಕ್ಕೆ
ಚಿತ್ರನಟ ಹಾಗೂ ಸಮಾಜ ಸೇವಕರಾದ ಚೇತನ್ ಅಹಿಂಸಾ ಅವರು ಭೇಟಿ ನೀಡಿದ್ದರು.

The post ಕಟ್ಟೆಮಳಲವಾಡಿ ಟೈಲರಿಂಗ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಟ ಚೇತನ್ first appeared on .

]]>

ಮೈಸೂರು: ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮಕ್ಕೆ
ಚಿತ್ರನಟ ಹಾಗೂ ಸಮಾಜ ಸೇವಕರಾದ ಚೇತನ್ ಅಹಿಂಸಾ ಅವರು ಭೇಟಿ ನೀಡಿದ್ದರು.

ಕಾರ್ಯನಿಮಿತ್ತ ಕಟ್ಟೆಮಳಲವಾಡಿ ಗ್ರಾಮಕ್ಕೆ ಆಗಮಿಸಿದ್ದ‌ ಚೇತನ್ ಅಹಿಂಸಾ ಅವರು ಇಲ್ಲಿನ ಸಮೃದ್ಧಿ ಮಹಿಳಾ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಟೈಲರಿಂಗ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ರು.

ಈ ವೇಳೆ ಟೈಲರಿಂಗ್ ತರಬೇತಿ ಪಡೆಯುತ್ತಿರುವ ಮಹಿಳೆಯರೊಂದಿಗೆ ಆತ್ಮೀಯವಾಗಿ ಮಾತನಾಡಿ ತರಬೇತಿ ಕುರಿತು ತಿಳಿದುಕೊಂಡರು.

The post ಕಟ್ಟೆಮಳಲವಾಡಿ ಟೈಲರಿಂಗ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಟ ಚೇತನ್ first appeared on .

]]>
ಏರೋ ಶೋ, ಹೊರ ರಾಜ್ಯದ ಕಲೆಗೆ ಅವಕಾಶ; ದಸರಾ ವೈಭವಕ್ಕೆ ಹೊಸ ಸ್ಪರ್ಶ: ಸಿಎಂ https://varshininews.co.in/cm-d-k-shivakumar-p-pattana/?utm_source=rss&utm_medium=rss&utm_campaign=cm-d-k-shivakumar-p-pattana Sat, 03 Oct 2026 13:25:56 +0000 https://varshininews.co.in/?p=37233 ಪಿರಿಯಾಪಟ್ಟಣದಲ್ಲಿ ಪ್ರಜಾಸೇವೆ ಆಂದೋಲನದಲ್ಲಿ ಭಾಗವಹಿಸಿ ಜನರ ಸಮಸ್ಯೆ ಆಲಿಸಿದ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ .

The post ಏರೋ ಶೋ, ಹೊರ ರಾಜ್ಯದ ಕಲೆಗೆ ಅವಕಾಶ; ದಸರಾ ವೈಭವಕ್ಕೆ ಹೊಸ ಸ್ಪರ್ಶ: ಸಿಎಂ first appeared on .

]]>

ಪಿರಿಯಾಪಟ್ಟಣ: ತಂತ್ರಜ್ಞಾನ ಬದಲಾದಂತೆ ಜನರ ನಿರೀಕ್ಷೆಯೂ ಬದಲಾಗುತ್ತಿದೆ. ಹೀಗಾಗಿ ನಾಡಹಬ್ಬ ಮೈಸೂರು ದಸರಾಕ್ಕೆ ಪ್ರತಿವರ್ಷ ಹೊಸತನದ ಸ್ಪರ್ಶ ನೀಡುವ ಉದ್ದೇಶದಿಂದ ಏರೋ ಶೋ, ಹೊರರಾಜ್ಯಗಳ ಕಲಾ ತಂಡಗಳ ಪ್ರದರ್ಶನ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಸೇರಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಪಿರಿಯಾಪಟ್ಟಣದಲ್ಲಿ ಪ್ರಜಾಸೇವೆ ಆಂದೋಲನದಲ್ಲಿ ಭಾಗವಹಿಸುವ ಮುನ್ನ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು.

‘ಸಿನಿಮಾ, ಟಿವಿ, ಕಂಪ್ಯೂಟರ್, ಮೊಬೈಲ್ ಬಳಿಕ ಈಗ ಕೃತಕ ಬುದ್ಧಿಮತ್ತೆ (ಎಐ) ಬಂದಿದೆ. ಜನರು ಎಲ್ಲವನ್ನೂ ಎಲ್ಲಿಂದಲಾದರೂ ನೋಡಬಹುದಾದ ಕಾಲ ಇದು. ಆದರೂ ನೇರವಾಗಿ ಕಣ್ಣಾರೆ ಕಾರ್ಯಕ್ರಮಗಳನ್ನು ನೋಡಲು ಜನ ಬರುತ್ತಾರೆ. ಹೀಗಾಗಿ ದಸರಾ ಆಚರಣೆಯಲ್ಲಿ ಪ್ರತಿವರ್ಷ ಸ್ವಲ್ಪವಾದರೂ ಬದಲಾವಣೆ ತರಬೇಕಿದೆ ಎಂದು ಹೇಳಿದರು.

ದಸರಾ ಸಂದರ್ಭದಲ್ಲಿ ಏರೋ ಶೋ ನಡೆಸುವಂತೆ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ,ಅವರು
ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,
ರಕ್ಷಣಾ ಪಡೆಗಳ ಶಿಸ್ತು, ಸಾಮರ್ಥ್ಯವನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಅರಿಯಬೇಕು. ಎನ್ಸಿಸಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯಕ್ಕೆ ಇದು ಪ್ರೇರಣೆಯಾಗಲಿದೆ ಎಂದು ತಿಳಿಸಿದರು.

ಬೈಲಕುಪ್ಪೆಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಮುದಾಯದ ವಿಶಿಷ್ಟ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ದಸರಾ ಸಂದರ್ಭದಲ್ಲಿ ಪ್ರದರ್ಶಿಸಲು ಅವಕಾಶ ನೀಡುವಂತೆ ಸೂಚಿಸಲಾಗಿದೆ,
ಸ್ಯಾಂಡಲ್ ವುಡ್ ನ ಹೊಸ ಹಾಗೂ ಹಿರಿಯ ಕಲಾವಿದರು ಕೂಡ ನಾಡಹಬ್ಬದಲ್ಲಿ ಪಾಲ್ಗೊಳ್ಳಬೇಕು. ಫಿಲಂ ಚೇಂಬರ್ ನವರಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ ಅವರು ಬರುವುದಾಗಿ ತಿಳಿಸಿದ್ದಾರೆ,ತಮಿಳುನಾಡು, ಕೇರಳ ಸೇರಿದಂತೆ ನೆರೆ ರಾಜ್ಯಗಳಿಗೂ ತಮ್ಮದೇ ಆದ ಕಲೆ, ಸಂಸ್ಕೃತಿ ಹಾಗೂ ಪರಂಪರೆ ಇದೆ. ಅವುಗಳನ್ನೂ ದಸರಾ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶವಿದೆ. ನೆರೆ ರಾಜ್ಯಗಳ ಕಲಾ ತಂಡಗಳನ್ನು ಆಹ್ವಾನಿಸುವಂತೆ ಸೂಚಿಸಲಾಗಿದೆ. ಪ್ರತಿವರ್ಷ ದಸರಾದಲ್ಲಿ ಹೊಸತನ ಕಾಣಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು.

ಕೆಲವು ಕೇಂದ್ರ ನಾಯಕರಿಗೂ ದಸರಾಕ್ಕೆ ಆಹ್ವಾನ ನೀಡುವ ಕುರಿತು ಚರ್ಚೆ ನಡೆದಿದೆ. ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅವಕಾಶ ಸಿಕ್ಕರೆ ಮೈಸೂರು ದಸರಾಕ್ಕೆ ಆಗಮಿಸುವಂತೆ ಮನವಿ ಮಾಡಿದ್ದೇನೆ. ಅವರ ರಾಜ್ಯಗಳಲ್ಲೂ ದಸರಾ ಇರುವುದರಿಂದ ಸಮಯಾವಕಾಶ ಸಿಕ್ಕರೆ ಬರಬೇಕು ಎಂದು ತಿಳಿಸಿದ್ದೇನೆ ಎಂದು ನುಡಿದರು.

ಫಾರಂ 7 ಗೊಂದಲದ ತನಿಖೆಗೆ ಎಸ್ಐಟಿ ರಚಿಸಲಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ,ಎಸ್ಐಆರ್ ಪ್ರಕ್ರಿಯೆಯಲ್ಲಿ ಗೊಂದಲ ಇರುವುದಂತೂ ಸತ್ಯ. ಚುನಾವಣಾ ಆಯೋಗಕ್ಕೆ 25 ಸಾವಿರ ಫಾರಂ 7 ಅರ್ಜಿ ಹಾಕಿದ್ದಾರೋ, 50 ಲಕ್ಷ ಹಾಕಿದ್ದಾರೋ. ಪೂರ್ವಮುದ್ರಿತ ಫಾರಂ–7 ಮೂಲಕ ಮತದಾರರ ಹೆಸರು ಅಳಿಸಲು ಮನವಿ ಮಾಡಿರುವುದಂತೂ ಸತ್ಯವಲ್ಲವೇ? ಅರ್ಜಿ ಕೊಟ್ಟವರಿಗೆ ಈ ವಿಚಾರ ಗೊತ್ತಿಲ್ಲ. ಇದಕ್ಕೆ ದಾಖಲೆಗಳಿವೆ. ವಿಚಾರದಲ್ಲಿ ಬಂದಿರುವ ದೂರುಗಳನ್ನು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಫಾರಂ–7 ಅರ್ಜಿಗಳ ವಿಚಾರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಯಾವುದೇ ಮತದಾರರ ಹೆಸರನ್ನು ತಕ್ಷಣ ಅಳಿಸದೆ, ಪ್ರತಿಯೊಂದು ಅರ್ಜಿಯನ್ನೂ ಪರಿಶೀಲಿಸುವಂತೆ ಎಲ್ಲ ಚುನಾವಣಾಧಿಕಾರಿಗಳಿಗೆ ಸಂದೇಶ ನೀಡಲಾಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಹಳೆಯ ಮತದಾರರ ಪಟ್ಟಿಯನ್ನೂ ಪರಿಶೀಲಿಸಿ, ಎಲ್ಲೆಲ್ಲಿ ತಪ್ಪುಗಳಾಗಿವೆ ಎಂಬುದನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಅಲ್ಪಸಂಖ್ಯಾತರು, ದಲಿತರು, ಪರಿಶಿಷ್ಟ ಜಾತಿ–ಪಂಗಡಗಳು ಹಾಗೂ ಬಡವರು ಸೇರಿದಂತೆ ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು

ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕು ಎಂಬ ಬಿಜೆಪಿ ನಾಯಕರ ಆಗ್ರಹಿಸಿದ್ದಾರಲ್ಲಾ ಎಂಬ ಇನ್ನೊಂದು ಪ್ರಶ್ನೆಗೆ,ತಾವು ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಲು ಹೋಗಿರಲಿಲ್ಲ. ರಾಜ್ಯದ ಪ್ರತಿನಿಧಿಯಾಗಿ ಸಂವಿಧಾನಾತ್ಮಕ ಸಂಸ್ಥೆಯ ಮುಂದೆ ಮನವಿ ಸಲ್ಲಿಸಲು ಹೋಗಿದ್ದೆ. ಚುನಾವಣಾ ಆಯೋಗಕ್ಕೆ ಗೌರವ ನೀಡುವುದು ನಮ್ಮ ಕರ್ತತ್ಯ. ನಾನು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಿ. ಕಾನೂನಿಗೆ ಗೌರವ ಕೊಡಬೇಕು. ನಾನೇನಾದರೂ ತಪ್ಪು ಮಾಡಿದರೆ ಕ್ರಮ ಕೈಗೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಸಿಎಂ ಉತ್ತರಿಸಿದರು.

ಬರ ಪರಿಶೀಲನೆಗೆ ಕೇಂದ್ರ ಸರ್ಕಾರದ ತಂಡ ಆಗಮಿಸಿರುವ ಬಗ್ಗೆ ಕೇಳಿದಾಗ,ಕೇಂದ್ರದಿಂದ ಆಗಮಿಸಿರುವ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಪ್ರದೇಶಗಳ ಪರಿಶೀಲನೆಗೆ ಮನವಿ ಮಾಡಲಾಗಿದೆ. ಈಗಾಗಲೇ 217 ತಾಲೂಕುಗಳು ಬರಪೀಡಿತವಾಗಿದೆ. ಮೊದಲ ಹಂತದಲ್ಲಿ ಕೆಲವು ಪ್ರದೇಶಗಳ ಪರಿಶೀಲನೆಗೆ ಬಂದಿರುವ ತಂಡವು ಎರಡು–ಮೂರು ಹಂತಗಳಲ್ಲಿ ಹೆಚ್ಚಿನ ಪ್ರದೇಶಗಳನ್ನೂ ಒಳಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕಳೆದ ಎರಡು ಬಾರಿ ರಾಜ್ಯ ಕೇಳಿದಷ್ಟು ಪರಿಹಾರ ಬಂದಿಲ್ಲ, ಈಗಲೇ ಆತುರಪಡುವುದಿಲ್ಲ. ಮೊದಲು ಕೇಂದ್ರ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾಸ್ತವ ಪರಿಸ್ಥಿತಿಯನ್ನು ವಿವರಿಸುತ್ತೇವೆ ಎಂದು ಸಿಎಂ ಹೇಳಿದರು.

ನೈಸ್ ಯೋಜನೆ ವ್ಯಾಪ್ತಿಯಲ್ಲಿ 1 ಎಕರೆ ಜಾಗ ಖರೀದಿ ಮಾಡಿದ್ದರೂ ನೇಣು ಹಾಕಿಕೊಳ್ಳುವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ,ಈಗ ಅದರ ಬಗ್ಗೆ ಚರ್ಚೆ ಬೇಡ. ರಾಜ್ಯ ಹಾಗೂ ದೇಶದಲ್ಲಿ ಕಾನೂನುಗಳಿವೆ,ಕಾನೂನು ಎಲ್ಲರಿಗೂ ಉತ್ತರ ಕೊಡುತ್ತದೆ ಎಂದು ತಿಳಿಸಿದರು.

The post ಏರೋ ಶೋ, ಹೊರ ರಾಜ್ಯದ ಕಲೆಗೆ ಅವಕಾಶ; ದಸರಾ ವೈಭವಕ್ಕೆ ಹೊಸ ಸ್ಪರ್ಶ: ಸಿಎಂ first appeared on .

]]>
ದಸರಾ; ತಪ್ಪಿದ ಭಾರಿ ಅನಾಹುತ;ಟಿಟಿವಾಹನದ ಮೇಲೆ ಬಿದ್ದ ವಿದ್ಯುತ್ ಕಟೌಟ್ https://varshininews.co.in/tt-driver-just-miss-frim-vidyut/?utm_source=rss&utm_medium=rss&utm_campaign=tt-driver-just-miss-frim-vidyut Sat, 03 Oct 2026 10:28:46 +0000 https://varshininews.co.in/?p=37229 ನಗರದ ಹೃದಯ ಭಾಗ ಗನ್ ಹೌಸ್ ವೃತ್ತದ ಬಳಿ ಅಳವಡಿಸಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಟೌಟ್ ಏಕಾಏಕಿ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

The post ದಸರಾ; ತಪ್ಪಿದ ಭಾರಿ ಅನಾಹುತ;ಟಿಟಿವಾಹನದ ಮೇಲೆ ಬಿದ್ದ ವಿದ್ಯುತ್ ಕಟೌಟ್ first appeared on .

]]>

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆಯೇ ನಗರದಲ್ಲಿ ದೊಡ್ಡ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿಸಿದೆ.

ನಗರದ ಹೃದಯ ಭಾಗ ಗನ್ ಹೌಸ್ ವೃತ್ತದ ಬಳಿ ಅಳವಡಿಸಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಟೌಟ್ ಏಕಾಏಕಿ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಬಂದಿದ್ದ ಟಿಟಿ ವಾಹನದ ಮೇಲೆ ಈ ಬೃಹತ್ ಕಟೌಟ್ ಬಿದ್ದಿದೆ. ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರಮುಖ ರಸ್ತೆಯಲ್ಲೆ ಈ ಘಟನೆ ನಡೆದಿದ್ದು,ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕೆಲವೇ ಗಂಟೆಗಳ ಹಿಂದೆ ಅಳವಡಿಸಿದ್ದ ಕಟೌಟ್ ನೆಲಕ್ಕೆ ಉರುಳಿದೆ. ಕಟೌಟ್ ಬೀಳುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದರು

ಈ ಅವಘಡಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮತ್ತು ಗುತ್ತಿಗೆ ಪಡೆದಿದ್ದ ಮೋಹನ್ ಎಂಬ ವ್ಯಕ್ತಿಯ ಬೇಜವಾಬ್ದಾರಿತನವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಬೃಹತ್ ಲೈಟ್ ಕಟೌಟ್ ಅಳವಡಿಕೆಗೆ ಕೇವಲ ಅರ್ಧ ಅಡಿ ಹಳ್ಳ ತೆಗೆದು ಕಂಬ ನೆಟ್ಟಿರುವುದು ಅತ್ಯಂತ ನಿರ್ಲಕ್ಷ್ಯದ ಪರಮಾವಧಿ, ವೈಜ್ಞಾನಿಕವಾಗಿ ಕಂಬವನ್ನು ಆಳವಾಗಿ ಹೂಳದೆ, ತಾತ್ಕಾಲಿಕವಾಗಿ ನಿಲ್ಲಿಸಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಟಿಟಿ ವಾಹನದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ವಲ್ಪ ಯಾಮಾರಿದ್ದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಅಲ್ಲದೆ ಕಟೌಟ್ ಬಳಿ ನಿಂತಿದ್ದ ಸಾರ್ವಜನಿಕರು ಕೂಡ ಪಾರಾದಂತಾಗಿದೆ.

ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಸೇರುವ ಸ್ಥಳದಲ್ಲೇ ಇಂತಹ ಕಳಪೆ ಕಾಮಗಾರಿ ನಡೆದಿರುವುದು ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಮೈಸೂರಿಗರು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ದೀಪಾಲಂಕಾರದ ಕಟೌಟ್‌ಗಳ ಸುರಕ್ಷತೆಯನ್ನು ಮರುಪರಿಶೀಲಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

The post ದಸರಾ; ತಪ್ಪಿದ ಭಾರಿ ಅನಾಹುತ;ಟಿಟಿವಾಹನದ ಮೇಲೆ ಬಿದ್ದ ವಿದ್ಯುತ್ ಕಟೌಟ್ first appeared on .

]]>
ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ ಎಫ್‌ಐಆರ್‌ ದಾಖಲೆ ನಿಲ್ಲಿಸಿ: ಅಶೋಕ https://varshininews.co.in/bjp-complaint-to-dgp-banglr/?utm_source=rss&utm_medium=rss&utm_campaign=bjp-complaint-to-dgp-banglr Sat, 03 Oct 2026 09:46:58 +0000 https://varshininews.co.in/?p=37226 ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸುವುದನ್ನು ನಿಲ್ಲಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹಾಗೂ ಬಿಜೆಪಿ ನಾಯಕರು ಪೊಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಿದರು.

The post ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ ಎಫ್‌ಐಆರ್‌ ದಾಖಲೆ ನಿಲ್ಲಿಸಿ: ಅಶೋಕ first appeared on .

]]>

ಬೆಂಗಳೂರು: ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸುವುದನ್ನು ನಿಲ್ಲಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹಾಗೂ ಬಿಜೆಪಿ ನಾಯಕರು ಪೊಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಂಸದರು, ಶಾಸಕರೊಂದಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಅವರು ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲೇ ಗೂಂಡಾಗಿರಿ ಮಾಡುತ್ತಿದೆ. ಫಾರ್ಮ್‌ 6, ಫಾರ್ಮ್‌ 7 ಎಲ್ಲವೂ ಸಂವಿಧಾನದತ್ತವಾಗಿ ನೀಡಿರುವ ಅರ್ಜಿಗಳು. ಫಾರ್ಮ್‌ 7 ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಫಾರ್ಮ್‌ 7 ನೀಡಿರುವವರನ್ನು ಬಂಧಿಸಬೇಕೆಂದು, ಕ್ರಿಮಿನಲ್‌ ಕೇಸ್‌ ದಾಖಲಿಸಬೇಕೆಂದು ಚುನಾವಣಾಧಿಕಾರಿ ಮೇಲೆ ಒತ್ತಡ ತಂದಿದ್ದಾರೆ. ಇದರಿಂದಾಗಿ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಎಲ್ಲ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ ಎಂದು ಗುಡುಗಿದರು.

ಫಾರ್ಮ್‌ 7 ನೀಡುವುದು ನಮ್ಮ ಹಕ್ಕು. ಮತದಾರರ ದಾಖಲೆ ಸರಿ ಇದೆಯೋ, ಇಲ್ಲವೋ ಎಂಬುದನ್ನು ಚುನಾವಣಾ ಆಯೋಗ ತೀರ್ಮಾನಿಸುತ್ತದೆ. ಆದರೆ ಕಾಂಗ್ರೆಸ್‌ ಹೇಳಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ನಡೆಯಬೇಕು ಎನ್ನುವುದು ಸಂವಿಧಾನ ವಿರೋಧಿ. ಬಾಂಗ್ಲಾದೇಶದವರನ್ನು ಕರೆದುಕೊಂಡು ಬಂದು ಕೋಗಿಲು ಕ್ರಾಸ್‌ನ 15 ಎಕರೆ ಜಾಗದಲ್ಲಿ ಅವರು ನೆಲೆಸುವಂತೆ ಮಾಡಲಾಗಿತ್ತು. ಅವರಿಗೆ ಕನ್ನಡ ಕೂಡ ಗೊತ್ತಿಲ್ಲ. ಅಲ್ಲಿ ನೆಲೆಸಿದ್ದ 300 ಕ್ಕೂ ಅಧಿಕ ಕುಟುಂಬಗಳ ಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಪ್ರಯತ್ನಿಸಲಾಗಿತ್ತು. ನಾವು ಇದರ ವಿರುದ್ಧ ಹೋರಾಟ ಮಾಡಿ, ಕೋರ್ಟ್‌ಗೆ ಹೋದ ನಂತರ ಅಂತಹ ಪ್ರಯತ್ನ ವಿಫಲವಾಯಿತು ಎಂದು ತಿಳಿಸಿದರು.

ಅಂತಹ 10 ಲಕ್ಷ ಬಾಂಗ್ಲಾ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಿದರೆ ಕಾಂಗ್ರೆಸ್‌ ಗೆಲ್ಲಲು ಅನುಕೂಲವಾಗುತ್ತದೆ. ಕೋಗಿಲು ಕ್ರಾಸ್‌ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಕೃಷ್ಣ ಬೈರೇಗೌಡ ಅವರು ಬಾಂಗ್ಲಾ ನಿವಾಸಿಗಳ ಪರವಾಗಿ ನಿಂತಿದ್ದರು. ಅವರಿಗೆ ಮನೆಗಳನ್ನು ನೀಡಲು ತೀರ್ಮಾನವಾಗಿತ್ತು. ನಂತರ ಆ ತೀರ್ಮಾನದಿಂದ ಹಿಂದೆ ಸರಿಯಲಾಯಿತು ಎಂದು ಹೇಳಿದರು

ಫಾರ್ಮ್‌ 7 ಮೂಲಕ ಬಾಂಗ್ಲಾ ದೇಶೀಯರ ಮತ ಕೈ ಬಿಟ್ಟು ಹೋಗುತ್ತಿದೆ. ಇದರಿಂದಾಗಿ ಕಾಂಗ್ರೆಸ್‌ಗೆ ಎಲ್ಲ ಕಡೆ ಸೋಲುವ ಭಯ ಉಂಟಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಎಲ್ಲ ಸಚಿವರು ಚುನಾವಣಾ ಆಯೋಗದ ಕಚೇರಿ ಮುಂಭಾಗ ಧರಣಿ ಮಾಡಿದ್ದಾರೆ ಎಂದು ಅಶೋಕ ಟೀಕಿಸಿದರು.

ಪೊಲೀಸರು ಪ್ರಕರಣ ದಾಖಲಿಸಿದರೂ ಬಿಜೆಪಿ ಕಾರ್ಯಕರ್ತರು ಜಗ್ಗುವುದಿಲ್ಲ. ಇದರಿಂದ ಹಿಂದೆ ಸರಿಯದೇ ಇದ್ದರೆ ಇನ್ನಷ್ಟು ತೀವ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ದೇಶ ಕಟ್ಟುವ ಆರ್‌ಎಸ್‌ಎಸ್‌ನಿಂದ ಅರ್ಜಿ ಪ್ರಿಂಟ್‌ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಚುನಾವಣೆಯಲ್ಲಿ ಅಕ್ರಮ ಮಾಡಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ನಂತರ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಇಂತಹ ಪಕ್ಷ ನಮಗೆ ಚುನಾವಣೆ ಬಗ್ಗೆ ಪಾಠ ಮಾಡುತ್ತಿದೆ ಎಂದು ಕಿಡಿಕಾರಿದರು.

ಈಗ ಬರಗಾಲ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಬಂದಿದೆ. ಕೇವಲ ಪರಿಶೀಲನೆ ಅಲ್ಲ. ಸರಿಯಾದ ಅಂಕಿ ಅಂಶಗಳನ್ನು ಅವರಿಗೆ ನೀಡಬೇಕು. ಮನಮೋಹನ್‌ ಸಿಂಗ್‌ ಸರ್ಕಾರಕ್ಕಿಂತ ದುಪ್ಪಟ್ಟು ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿದೆ. ಕಾಂಗ್ರೆಸ್‌ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ ಎಂದು ಅಶೋಕ್ ಆರೋಪಿಸಿದರು.

The post ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ ಎಫ್‌ಐಆರ್‌ ದಾಖಲೆ ನಿಲ್ಲಿಸಿ: ಅಶೋಕ first appeared on .

]]>
ಚಿನ್ನತಂಬಿ ಬೆಂಬಲಿಗರಿಂದ ಹಲ್ಲೆ ಆರೋಪ; ನಾಲ್ವರ ವಿರುದ್ಧ ಎಫ್ಐಆರ್ https://varshininews.co.in/fir-against-chinnatambi-folowr/?utm_source=rss&utm_medium=rss&utm_campaign=fir-against-chinnatambi-folowr Sat, 03 Oct 2026 09:25:22 +0000 https://varshininews.co.in/?p=37223 ಮೈಸೂರಿನ ಬಹುಕೋಟಿ ಗೋಲ್ಡ್ ಸ್ಕ್ಯಾಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದಾನ ನೆಪದಲ್ಲಿ ಕರೆಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

The post ಚಿನ್ನತಂಬಿ ಬೆಂಬಲಿಗರಿಂದ ಹಲ್ಲೆ ಆರೋಪ; ನಾಲ್ವರ ವಿರುದ್ಧ ಎಫ್ಐಆರ್ first appeared on .

]]>

ಮೈಸೂರು: ಮೈಸೂರಿನ ಬಹುಕೋಟಿ ಗೋಲ್ಡ್ ಸ್ಕ್ಯಾಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದಾನ ನೆಪದಲ್ಲಿ ಕರೆಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಬೆಂಗಳೂರಿನ ಲೋಕೇಶ್ ನೀಡಿದ ದೂರಿನ ಮೇರೆಗೆ ರವಿಕಿರಣ್, ರಕ್ಷಿತ್ ಸೇರಿದಂತೆ ನಾಲ್ವರ ವಿರುದ್ಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನತಂಬಿ ಆಪ್ತರು ಸೆಟಲ್ಮೆಂಟ್ ಮಾಡುವುದಾಗಿ ಕರೆಸಿ, ಕಲ್ಲು ಮತ್ತು ಕಬ್ಬಿಣದ ರಾಡ್‌ನಿಂದ ಲೋಕೇಶ್, ಹೇಮಾ, ಶೋಭಾ, ಪೂರ್ಣಿಮಾ, ಸಂತೋಷ್, ಮಹೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಗಾಯಾಳುಗಳು ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಟ್ರಾಮಾ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಎಸ್‌ಐ ಚನ್ನಬಸಪ್ಪ ಆಸ್ಪತ್ರೆಗೆ ತೆರಳಿ ದೂರು ದಾಖಲಿಸಿಕೊಂಡಿದ್ದಾರೆ.

The post ಚಿನ್ನತಂಬಿ ಬೆಂಬಲಿಗರಿಂದ ಹಲ್ಲೆ ಆರೋಪ; ನಾಲ್ವರ ವಿರುದ್ಧ ಎಫ್ಐಆರ್ first appeared on .

]]>
ಕ್ಯಾಪ್ಟನ್ ಅಭಿಮನ್ಯು ಅ.5ಕ್ಕೆ ಅರಮನೆಗೆ;ನಿಶಾನೆ ಆನೆಯಾಗಿ ಮಿಂಚಿಂಗ್ https://varshininews.co.in/captsin-abhimanyu-oct-5-mys/?utm_source=rss&utm_medium=rss&utm_campaign=captsin-abhimanyu-oct-5-mys Sat, 03 Oct 2026 08:47:28 +0000 https://varshininews.co.in/?p=37220 ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ಪ್ರಮುಖ ಆನೆ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಜವಾಬ್ದಾರಿ ನಿರ್ವಹಿಸಿ ಮಿಂಚಲಿದ್ದಾನೆ.

The post ಕ್ಯಾಪ್ಟನ್ ಅಭಿಮನ್ಯು ಅ.5ಕ್ಕೆ ಅರಮನೆಗೆ;ನಿಶಾನೆ ಆನೆಯಾಗಿ ಮಿಂಚಿಂಗ್ first appeared on .

]]>

ಮೈಸೂರು:ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ಪ್ರಮುಖ ಆನೆ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಜವಾಬ್ದಾರಿ ನಿರ್ವಹಿಸಿ ಮಿಂಚಲಿದ್ದಾನೆ.

ನಾಗರಹೊಳೆಯ ಮತ್ತಿಗೂಡು ಶಿಬಿರದಲ್ಲಿರುವ ಅಭಿಮನ್ಯು ಆರೋಗ್ಯವಾಗಿದ್ದು, ಅಕ್ಟೋಬರ್ 5ರಂದು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದಾನೆ ಎಂದು ಡಿಸಿಎಫ್ ರವಿಶಂಕರ್ ತಿಳಿಸಿದರು.

ಅರಮನೆಗೆ ಬಂದ ಬಳಿಕ ಜನಸಂದಣಿ, ವಾದ್ಯಗೋಷ್ಠಿ ಮತ್ತು ಬಂದೋಬಸ್ತ್ ನಡುವೆ ನಡೆಯುವ ಮೆರವಣಿಗೆಗೆ ಹೊಂದಿಕೊಳ್ಳಲು ಅಭಿಮನ್ಯು ತಾಲೀಮಿನಲ್ಲಿ ಭಾಗವಹಿಸಲಿದ್ದಾನೆ.

ಅಭಿಮನ್ಯು ಸೇರಿದಂತೆ ಎಲ್ಲಾ ದಸರಾ ಆನೆಗಳ ಆರೋಗ್ಯದ ಮೇಲೆ ಅರಣ್ಯ ಇಲಾಖೆ ಮತ್ತು ಪಶುವೈದ್ಯರ ತಂಡ ವಿಶೇಷ ನಿಗಾ ವಹಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

The post ಕ್ಯಾಪ್ಟನ್ ಅಭಿಮನ್ಯು ಅ.5ಕ್ಕೆ ಅರಮನೆಗೆ;ನಿಶಾನೆ ಆನೆಯಾಗಿ ಮಿಂಚಿಂಗ್ first appeared on .

]]>
ಯುವ ಸಂಭ್ರಮದಲ್ಲಿ ಮನಸೂರೆಗೊಂಡ ನಿರೀಕ್ಷೆ ವಿಶೇಷ ಮಕ್ಕಳ ನೃತ್ಯ ಪ್ರದರ್ಶನ https://varshininews.co.in/nirikshe-speciak-children-dance/?utm_source=rss&utm_medium=rss&utm_campaign=nirikshe-speciak-children-dance Sat, 03 Oct 2026 08:26:23 +0000 https://varshininews.co.in/?p=37217 ಯುವ ಸಂಭ್ರಮ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ನಗರದ ನಿರೀಕ್ಷೆ ವಿಶೇಷ ಶಾಲೆಯ ಮಕ್ಕಳ ನೃತ್ಯ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು.

The post ಯುವ ಸಂಭ್ರಮದಲ್ಲಿ ಮನಸೂರೆಗೊಂಡ ನಿರೀಕ್ಷೆ ವಿಶೇಷ ಮಕ್ಕಳ ನೃತ್ಯ ಪ್ರದರ್ಶನ first appeared on .

]]>

ಮೈಸೂರು: 2026ರ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ನಗರದ ನಿರೀಕ್ಷೆ ವಿಶೇಷ ಶಾಲೆಯ ಮಕ್ಕಳ ನೃತ್ಯ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು.

ವಿಶೇಷ ಮಕ್ಕಳ ಆತ್ಮವಿಶ್ವಾಸ, ಪ್ರತಿಭೆ ಹಾಗೂ ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸಿದ ಈ ಪ್ರದರ್ಶನಕ್ಕೆ ಪ್ರೇಕ್ಷಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯಶಸ್ಸಿನ ಹಿಂದೆ ಶಾಲೆಯ ಶಿಕ್ಷಕರ ಶ್ರಮ ಮತ್ತು ಸಮರ್ಪಣೆ ಪ್ರಮುಖ,ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ತರಬೇತಿ ನೀಡಿದ ಶಿಕ್ಷಕರು, ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಮೂಲಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಪ್ರದರ್ಶನ ನೀಡುವಂತೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ.

ವಿಶೇಷ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಸಹನೆ, ಕಾಳಜಿ ಮತ್ತು ಬದ್ಧತೆಯೇ ಮಕ್ಕಳ ಪ್ರತಿಭೆ ಹೊರಹೊಮ್ಮಲು ಕಾರಣವಾಗಿದೆ.

ಯುವ ಸಂಭ್ರಮದಲ್ಲಿ ನಿರೀಕ್ಷೆ ಶಾಲೆಯ ಮಕ್ಕಳ ಪ್ರದರ್ಶನ ಇದಕ್ಕೆ ಉತ್ತಮ ಉದಾಹರಣೆಯಾಗಿದೆ

The post ಯುವ ಸಂಭ್ರಮದಲ್ಲಿ ಮನಸೂರೆಗೊಂಡ ನಿರೀಕ್ಷೆ ವಿಶೇಷ ಮಕ್ಕಳ ನೃತ್ಯ ಪ್ರದರ್ಶನ first appeared on .

]]>
ಹುಣಸೂರು ತಾ.ಉದ್ದೂರು ಕಾವಲ್ ಗ್ರಾಪಂ ನಲ್ಲಿ ಪ್ರಜಾಸೇವೆ‌ ಆಂದೋಲನ ಯಶಸ್ವಿ https://varshininews.co.in/prajaseva-andolana-udduru/?utm_source=rss&utm_medium=rss&utm_campaign=prajaseva-andolana-udduru Sat, 03 Oct 2026 08:10:50 +0000 https://varshininews.co.in/?p=37213 ಪ್ರಜಾಸೇವೆ ಆಂದೋಲನವು ಇಂದು ಹುಣಸೂರು ತಾಲೂಕು ಉದ್ದೂರು ಕಾವಲ್ ಗ್ರಾಮಪಂಚಾಯಿತಿ ಆವರಣದಲ್ಲಿ ತಹಸೀಲ್ದಾರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

The post ಹುಣಸೂರು ತಾ.ಉದ್ದೂರು ಕಾವಲ್ ಗ್ರಾಪಂ ನಲ್ಲಿ ಪ್ರಜಾಸೇವೆ‌ ಆಂದೋಲನ ಯಶಸ್ವಿ first appeared on .

]]>

ಹುಣಸೂರು: ಮುಖ್ಯ ಮಂತ್ರಿ
ಡಿ.ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವೆ ಆಂದೋಲನವು ಇಂದು ಹುಣಸೂರು ತಾಲೂಕು ಉದ್ದೂರು ಕಾವಲ್ ಗ್ರಾಮಪಂಚಾಯಿತಿ ಆವರಣದಲ್ಲಿ ತಹಸೀಲ್ದಾರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಅಂದೋಲನ ಸಭೆಯಲ್ಲಿ ಗ್ರಾಮಸ್ತರಿಂದ ಸಮಸ್ಯೆಗಳ ಕುರಿತು ಅರ್ಜಿಯನ್ನು ಸ್ವೀಕರಿಸಿ ಸಮಸ್ಯೆ ಆಲಸಿ ಪರಿಹಾರ ಸೂಚಿಸಲಾಯಿತು.

ವಿಧವಾ ವೇತನ ಯೋಜನೆ,
ಅಂಗವಿಕಲರ ಮಾಸಾಶನ ಯೋಜನೆ,
ಸಂಧ್ಯಾ ಸುರಕ್ಷಾ ಯೋಜನೆ,
ಇತರೆ ಪಿಂಚಣಿ ಯೋಜನೆ,
ಪಹಣಿ ತಿದ್ದುಪಡಿ,ಪೋಡಿ,
ಖಾತೆ ಬದಲಾವಣೆ,
ಶಕ್ತಿ ಉಚಿತ ಬಸ್ ಯೋಜನೆ,ವಸತಿ ಯೋಜನೆ,ನಿವೇಶನ/ಮನೆ ಹಂಚಿಕೆ,
ಹೊಸ ಪಡಿತರ ಚೀಟಿ,ಸಾರಿಗೆ,
ರಸ್ತೆ ಅಭಿವೃದ್ಧಿ,ಕುಡಿಯುವ ನೀರು,
ಅನ್ನ ಭಾಗ್ಯ ಯೋಜನೆ,ಗೃಹ ಲಕ್ಷ್ಮೀ ಯೋಜನೆ,ಸರ್ಕಾರಿ ಶಾಲೆಗಳ/ಅಂಗನವಾಡಿ ಅಭಿವೃದ್ಧಿ,ಮಹಾತ್ಮ ಗಾಂಧಿ ನರೇಗಾ ಯೋಜನೆ,ಪೋಲೀಸ್ ಇಲಾಖೆ ಸೇವೆ,
ಖಾಸಗಿ ಉದ್ಯೋಗ,ಕೆರೆ ತುಂಬಿಸುವ ಯೋಜನೆ/ ಬೃಹತ್ ನೀರಾವರಿ
ದೇವಸ್ಥಾನ ಅಭಿವೃದ್ಧಿ/ಜೀರ್ಣೋದ್ಧಾರ,
ಗೃಹ ಜ್ಯೋತಿ ಯೋಜನೆ ಹೀಗೆ ಅನೇಕ ಯೋಜನೆಗಳ ಬಗ್ಗೆ ಅರ್ಜಿ ಸ್ವೀಕರಿಸಿ ತಹಸೀಲ್ದಾರ್ ಅವರು ಅರ್ಜಿದಾರರನ್ನು ಕರೆಸಿ ಸಮಸ್ಯೆ ಆಲಿಸಿ,ಪರಿಹಾರವನ್ನು ಕಂಡುಕೊಳ್ಳಲಾಯಿತು.

ಕೆಲವರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಶೀಘ್ರ ಬಗೆಹರಿಸುವಂತೆ ತಹಸೀಲ್ದಾರ್ ಮಂಜುನಾಥ್ ಸೂಚಿಸಿದರು.

ಉದ್ದೂರು ಕಾವಲ್ ಗ್ರಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 150 ರಿಂದ 200 ಮಂದಿ‌ ಆಗಮಿಸಿ ‌ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಇದೇ‌ ವೇಳೆ ಹೊನ್ನಿಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ‌ ಎರಡು ಎಕರೆ ಜಾಗ‌ ಬಿಟ್ಟುಕೊಡುವಂತೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ಅವರು ಮನವಿ ಮಾಡಿದರು.

ಇದಕ್ಕೆ ತಹಸೀಲ್ದಾರ್ ಮಂಜುನಾಥ್ ಅವರು ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲೇ ಜಾಗವನ್ನು ಬಿಡಿಸಿಕೊಡುವಂತೆ ಆದೇಶಿಸಿದರು.

ಸಭೆಯಲ್ಲಿ ಮಾತನಾಡಿದ ಮಂಜುನಾಥ್ ಅವರು ಗೌರಿಪುರ ವನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಮತ್ತು ಜಮೀನುಗಳನ್ನು ನೋಂದಣಿ ಮಾಡಿಸಿ ಇ ಖಾತೆ ಮಾಡಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಪ್ರಜಾ ಸೇವಾ ಆಂದೋಲನದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್, ಇ ಒ ಹೊಂಗಯ್ಯ,ಎಇಇ ಚನ್ನಕೇಶವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬೋರೇಗೌಡ, ಕುಡಿಯುವ ನೀರು ಸರಬರಾಜ ಇಲಾಖೆ ಅಧಿಕಾರಿ ರಾಜೇಂದ್ರ ಕೆ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರಿಗೆ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.

The post ಹುಣಸೂರು ತಾ.ಉದ್ದೂರು ಕಾವಲ್ ಗ್ರಾಪಂ ನಲ್ಲಿ ಪ್ರಜಾಸೇವೆ‌ ಆಂದೋಲನ ಯಶಸ್ವಿ first appeared on .

]]>
ದಸರಾಗೆ ಸಜ್ಜಾಗುತ್ತಿದೆ ಕರಾವಳಿಯ ಜಾನಪದ ಕ್ರೀಡೆ ಕಂಬಳ: ಡಾ.ಯತೀಂದ್ರ https://varshininews.co.in/dashera-kambala-kreede-18th/?utm_source=rss&utm_medium=rss&utm_campaign=dashera-kambala-kreede-18th Fri, 02 Oct 2026 18:02:13 +0000 https://varshininews.co.in/?p=37210 ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ವಿಶೇಷವಾಗಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ತಿಳಿಸಿದರು.

The post ದಸರಾಗೆ ಸಜ್ಜಾಗುತ್ತಿದೆ ಕರಾವಳಿಯ ಜಾನಪದ ಕ್ರೀಡೆ ಕಂಬಳ: ಡಾ.ಯತೀಂದ್ರ first appeared on .

]]>

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ವಿಶೇಷವಾಗಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ತಿಳಿಸಿದರು.

ಇಂದು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಆಯೋಜನೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿಯ ದಸರಾ ಉತ್ಸವಕ್ಕೆ ಹೊಸ ರೂಪ ಮತ್ತು ಸ್ಪರ್ಶ ನೀಡುವ ಉದ್ದೇಶದಿಂದ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳವನ್ನು ಮೈಸೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಕಂಬಳ ಕೂಟವನ್ನು ಅಕ್ಟೋಬರ್ 18 ರಂದು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಂಬಳ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರಿಗೆ ವಹಿಸಲಾಗಿದ್ದು, ಜಿಲ್ಲಾಡಳಿತ ಅವರಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.

ಕಂಬಳದ ಸಂಘಟಕರು ಇದನ್ನು ಯಾವುದೇ ಲಾಭದ ಉದ್ದೇಶವಿಲ್ಲದೆ, ಸಂಪ್ರದಾಯ ಹಾಗೂ ಕ್ರೀಡೆಯನ್ನು ಜೀವಂತವಾಗಿಡಲು ಆಯೋಜಿಸುತ್ತಿದ್ದಾರೆ. ಈ ದೇಶೀಯ ಕ್ರೀಡೆಯನ್ನು ಉಳಿಸಿ ಬೆಳೆಸಲು ಸರ್ಕಾರ ಮತ್ತು ಜಿಲ್ಲಾಡಳಿತ ಬೆಂಬಲ ನೀಡಲಿದೆ. ದಸರಾ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ, ಕಂಬಳವನ್ನು ಇಲ್ಲಿ ಪ್ರದರ್ಶಿಸುವುದರಿಂದ ಈ ಜಾನಪದ ಕ್ರೀಡೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮತ್ತು ಪ್ರಚಾರ ಸಿಗಲಿದೆ ಎಂದು ‌ಸಚಿವರು ಅಭಿಪ್ರಾಯ ಪಟ್ಟರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅವರು ಮಾತನಾಡಿದ, ಕಂಬಳದ ಯಶಸ್ಸಿಗೆ ಅಗತ್ಯವಿರುವ ಶಾಮಿಯಾನ, ನಿರ್ಮಿತಿ ಕೇಂದ್ರದಿಂದ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳ ಎಲ್ಲಾ ವ್ಯವಸ್ಥೆಗಳನ್ನು ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ತಂಡ ಮಾಡಿಕೊಡಲಿದೆ ಎಂದು ತಿಳಿಸಿದರು.

ಈ ಕ್ರೀಡಾಕೂಟವನ್ನು ನೋಡಿ ನಮ್ಮಲ್ಲೂ ಪ್ರತಿವರ್ಷ ಕಂಬಳ ಆಯೋಜಿಸಿ ಎಂದು ಮೆಚ್ಚಿಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮ ಮೂಡಿಬರಬೇಕು.
ಈ ಬಾರಿಯ ದಸರಾದಲ್ಲಿ ಏರ್‌ಶೋ, ಮುಂತಾದ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳಿದ್ದರೂ, ಕಂಬಳ ಕ್ರೀಡಾಕೂಟವೇ ದಸರಾದ ಪ್ರಮುಖ ಆಕರ್ಷಣೆಯಾಗಿ ಮೇಲುಗೈ ಸಾಧಿಸಬೇಕು ಹಾಗೂ ಎಲ್ಲರೂ ಮೆಚ್ಚುವಂತೆ ಯಶಸ್ವಿಯಾಗಬೇಕು ಎಂದು ಆಶಿಸಿದರು.

ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಮಾತನಾಡಿ ಕಂಬಳ ಸ್ಪರ್ಧೆಗಾಗಿ 145 ಮೀಟರ್ ಉದ್ದದ ಟ್ರ್ಯಾಕ್ ಸಿದ್ಧಪಡಿಸಲಾಗುತ್ತಿದೆ. ಈ ಕೂಟದಲ್ಲಿ ಹಿಂದೆ ಉತ್ತಮ ದಾಖಲೆ ಬರೆದಿರುವ ಹಿರಿಯ ದರ್ಜೆಯ ಸುಮಾರು 150 ರಿಂದ 160 ಜೋಡಿ ಕೋಣಗಳು ಭಾಗವಹಿಸಲಿವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೃಹತ್ ಪ್ರಚಾರ ಫಲಕಗಳನ್ನು ಹಾಕಲಾಗುವುದು ಎಂದು ಹೇಳಿದರು.

ಕಂಬಳವು ಯಾವುದೇ ವಾಣಿಜ್ಯ ಉದ್ದೇಶ ಹೊಂದಿಲ್ಲ, ಇದು ಕರಾವಳಿ ಜನರ ಗೌರವ ಮತ್ತು ಸಂಪ್ರದಾಯದ ಸಂಕೇತವಾಗಿದೆ. ಒಂದು ಜೋಡಿ ಕೋಣವನ್ನು ಕರೆತರಲು ಯಜಮಾನರಿಗೆ ಸುಮಾರು 2 ಲಕ್ಷ ರೂಪಾಯಿ ಖರ್ಚಾಗುತ್ತದೆ. ವಿಜೇತರಿಗೆ 16 ಗ್ರಾಂ ಹಾಗೂ 8 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತದೆ. ಕಂಬಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ, 8,000 ಜನರು ಕುಳಿತು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ವಿದೇಶಿ ಪ್ರವಾಸಿಗರಿಗಾಗಿ ವಿಶೇಷ ಕೌಂಟರ್ ಹಾಗೂ ಪಾಸ್ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.

ಕಂಬಳದ ಜೊತೆಗೆ ಕರಾವಳಿ ಭಾಗದ ಪ್ರಸಿದ್ಧ ಖಾದ್ಯಗಳಾದ ಕೋಳಿ ರೊಟ್ಟಿ, ಪುಂಡಿ, ನೀರ್ ದೋಸೆ ಮುಂತಾದ ಆಹಾರ ಪದಾರ್ಥಗಳ ಮಳಿಗೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನ ಇರಲಿದೆ. ಅಕ್ಟೋಬರ್ 18 ರ ಸಾಯಂಕಾಲ 6.30ಕ್ಕೆ ಕಂಬಳ ಕ್ರೀಡಾಕೂಟಕ್ಕೆ ಅಧಿಕೃತ ಉದ್ಘಾಟನೆ ಸಿಗಲಿದ್ದು, ಅಕ್ಟೋಬರ್ 19 ರ ಸಾಯಂಕಾಲದವರೆಗೆ ನಿರಂತರವಾಗಿ ನಡೆದು ಬಹುಮಾನ ವಿತರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಸನಿಲ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಹಾಗೂ ಕಂಬಳ ಸಮಿತಿಯ ಇತರ ಪದಾಧಿಕಾರಿಗಳು, ಆಯೋಜಕರು ಮತ್ತು ಕೋಣಗಳ ಯಜಮಾನರು ಉಪಸ್ಥಿತರಿದ್ದರು.

The post ದಸರಾಗೆ ಸಜ್ಜಾಗುತ್ತಿದೆ ಕರಾವಳಿಯ ಜಾನಪದ ಕ್ರೀಡೆ ಕಂಬಳ: ಡಾ.ಯತೀಂದ್ರ first appeared on .

]]>