ಉಡುಪಿ: ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಅರ್ಪಿಸುವ ರಾಷ್ಟ್ರಮಟ್ಟದ ಕರೋಕೆ ಗಾಯನ ಕಾರ್ಯಕ್ರಮ, ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಫೆ.16 ರಂದು ನಡೆಯಲಿದೆ.
ಕಾರ್ಯಕ್ರಮದ ಬಗ್ಗೆ ಉಡುಪಿ ಜಿಲ್ಲೆಯ ಒಂದು ಹೆಜ್ಜೆ ರಕ್ತದಾನಿಗಳ ಬಳಗ ಪೋಸ್ಟರ್ ಬಿಡುಗಡೆ ಮಾಡಿದೆ. ಉಡುಪಿ ಜಿಲ್ಲೆ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗೊರ್ಮೆ ಅವರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು

ಕಾರ್ಯಕ್ರಮವು ಉಡುಪಿ, ಬೈಲಕೆರೆ
ಹೋಟೆಲ್ ಮಥುರ ಕಂಫರ್ಟ್ ಶ್ರೀ ಕೃಷ್ಣಮಠ ಪಾರ್ಕಿಂಗ್ ಪ್ರದೇಶದಲ್ಲಿ
ಫೆ.16 ರಂದು ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಮೊಟ್ಟ ಮೊದಲ ಬಾರಿಗೆ ಗಾಯಕರಿಗೆ ಈ ಒಂದು ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ವಿಶೇಷ.
ಕಾರ್ಯಕ್ರಮವನ್ನು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತೀಯ ಮಾನವ ಹಕ್ಕುಗಳ ಮಂಡಳಿ ರಾಜ್ಯದ್ಯಕ್ಷ
ಪ್ರಸಾದ್ ರೈ, ನಟ ನಿರ್ದೇಶಕ ನಿರ್ಮಾಪಕ ಕಲಾಭೂಮಿ ಪ್ರತಿಷ್ಠಾನ ಅಧ್ಯಕ್ಷರೂ ಆದ ಆಸ್ಕರ್ ಕೃಷ್ಣ, ನಟ ನಿರ್ದೇಶಕ ನಿರ್ಮಾಪಕರಾದ ನಂದನ್, ಸಂಸ್ಥಾಪಕರು ಸ್ಯಾಂಡಲ್ವುಡ್ ಫಿಲಂ ಇನ್ಸ್ಟಿಟ್ಯೂಟ್ ನಾ ಆನಂದ್ ಕಲ್ಪತರು, ಉಡುಪಿ ಕರೋಕೆ ಮ್ಯೂಸಿಕಲ್ ಕ್ಲಬ್ ಸಂಸ್ಥಾಪಕ ಮದನ್ ಮಣಿಪಾಲ್, ಸಂಸ್ಥಾಪಕರು ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ನ ಪ್ರಕಾಶ್ ಕಾಮತ್, ಗಾಯಕರಾದ ವಿಲ್ತ್ರೆಡ್ ವಿಜಯ ಡೇಸ್, ಪತ್ರಕರ್ತ ಪ್ರಕಾಶ್ ಸುವರ್ಣ, ಕಲಾವಿದರಾದ ನಾಗೇಶ್ ಕಾಮತ್ ಭಾಗವಹಿಸಲಿದ್ದಾರೆ.
ಸಾಧಕರಾದ ಸೋಮನಾಥ ಶೆಟ್ಟಿ ನಟರು ನಿರ್ದೇಶಕರು, ಜೋಸೆಫ್ ಲೋಬೋ ಶಂಕರಪುರ ಕೃಷಿ ಕ್ಷೇತ್ರ, ರೀಶಲ್ ಮೆಲ್ಬಾ ಕ್ರಾಸ್ತ ಬಾಲ ಪ್ರತಿಭೆ, ಮಾಸ್ಟರ್ ಆಯುಷ್ ಮೆನೇಜಸ್ ಬಾಲ ಪ್ರತಿಭೆ ಇವರುಗಳಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಗುತ್ತದೆ.
ಈ ಕಾರ್ಯಕ್ರಮವನ್ನು ನೀಮಾ ಲೋಬೋ ಶಂಕರಪುರ, ರಕ್ತದಾನಿ ಮಂಜು ಮೈಸೂರು, ನಿಂಗರಾಜು ಮಂಡ್ಯ ಅವರುಗಳು ಆಯೋಜಿಸಿದ್ದಾರೆ.
ಕಾರ್ಯಕ್ರಮಕ್ಕೆ ವಿಶೇಷ ಕಲಾವಿದ ಜಿ ಕನ್ನಡ ಕಾಮಿಡಿ ಕಿಲಾಡಿ ಮೀನನಾಥ ಮಂಗಳೂರು ಆಗಮಿಸುತ್ತಿರುವುದು ವಿಶೇಷ.