ಮೈಸೂರು: ಮಹಿಳೆಯರಲ್ಲಿ ಅಘಾದವಾದ ಶಕ್ತಿ ಅಡಗಿದೆ, ಸಮಾಜದ ಅಭ್ಯುದಯದಲ್ಲಿ ಮಹಿಳಾ ಶಕ್ತಿಯ ಕೊಡುಗೆ ವಿಶಿಷ್ಟ ಎಂದು ನಟ ಆದಿ ಲೋಕೇಶ್ ಹೇಳಿದರು.
ನಗರದ ಬಿ ಎನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಆಯೋಜಿಸಿದ್ದ ಫ್ಯಾಶನ್ ಶೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಗೆ ಸರಿಸಾಟಿ ಯಾರೂ ಇಲ್ಲ, ಮಹಿಳೆ ಕಲಿತರೆ ಶಾಲೆ ತೆರೆದಂತೆ,ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು, ತಮ್ಮಲ್ಲಿನ ಕೀಳರಿಮೆ ತೊರೆದು ಸಮಾಜದ ಒಳಿತಿಗೆ ದುಡಿಯಬೇಕು, ಮಹಿಳೆ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಬೇಕು ಎಂದು ಕರೆ ನೀಡಿದರು.
ಮಹಿಳೆಯರಲ್ಲಿ ಹದುಗಿರುವ ಶಕ್ತಿ, ಸಮಾನತೆ ಸಾರ ಬಿಂಬಿಸಬೇಕು, ಪರಿಶ್ರಮ, ಆತ್ಮ ವಿಶ್ವಾಸ, ನಂಬಿಕೆ,ದಿಟ್ಟತನ, ಗುರಿಯನ್ನು ಮೈಗೊಡಿಸಿಕೊಳ್ಳಬೇಕು ಎಂದು ಆದಿ ಲೋಕೇಶ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರೂಪದರ್ಶಿ ಜ್ಯೋತಿ ಬಿ ಡಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವಿಶೇಷ ಚೇತನರ ಅಂತರಾಷ್ಟ್ರೀಯ ಕ್ರೀಡಾಪಟು ಅಲೋಕ್ ಜೈನ್,
ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸೌಮ್ಯ ಅದಿ ಲೋಕೇಶ್, ರಿಷಿ ಆದಿ ಲೋಕೇಶ್, ಶಿಕ್ಷಕಿಯರಾದ ದೀಪ, ಅನುಸೂಯ, ಮಲೆ ಮಾದೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಶ್ರೇಯಸ್,ಅಮಿತ್ ಕುಮಾರ್, ಕಿರಣ್ ಜೈನ್, ಚಾಂದಿನಿ, ಸಾಧನ, ಕವನ, ಸ್ಮಿತಾ ಬಿ , ಡಾಕ್ಟರ್ ಪ್ರಸಾದ್ ಮತ್ತಿತರರು ಹಾಜರಿದ್ದರು.