ರೈತರ ಉನ್ನತೀಕರಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಪ್ರಕಾಶ್ ಪ್ರಿಯದರ್ಶನ್ ಆಗ್ರಹ

Spread the love

ಮೈಸೂರು: ದೇಶದಲ್ಲಿ ರೈತರನ್ನು ಉನ್ನತಿಕರಿಸುವ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಬೇಕು ಎಂದು ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಒತ್ತಾಯಿಸಿದರು.

ಕುವೆಂಪು ನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ಮೆತ್ತ ಲೋಕದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ
ಮಾಜಿ ಪ್ರಧಾನಿ ಚರಣ್ ಸಿಂಗ್ ಚೌದರಿ ಅವರ ಸ್ಮರಣಾರ್ಥ ಆಚರಿಸುತ್ತಿರುವ
ರೈತ ದಿನಾಚರಣೆ ಅಂಗವಾಗಿ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ರೈತರು ಬೆಳೆದ ಬೆಳಗಳಿಗೆ ಹೆಚ್ಚು ಪ್ರಾಶಸ್ತ್ರ ನೀಡಬೇಕು,ನಾಡಿನ ಹಾಗೂ ದೇಶದ ಯಾವುದೇ ಮಾಲ್ ಗಳಲ್ಲಿ, ನಾವು ತಿನ್ನುವ ಅನ್ನ ಬೆಳೆಯುವ ರೈತನಿಗೆ ಪ್ರಥಮ ಆಧ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಈ ಮೂಲಕ ರೈತರಿಗೆ ಉತ್ತೇಜನ ನೀಡಬೇಕು,ಎಲ್ಲೆಡೆ ರೈತರನ್ನು ಗೌರವಿಸಬೇಕು ಹಾಗಾದಾಗ ಮಾತ್ರ ಅನ್ನದಾತನ ಋಣ ತೀರಿಸಲು ಸಾಧ್ಯ ಎಂದು ತಿಳಿಸಿದರು.

ರೈತ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಮಾಲ್ ಗಳಲ್ಲಿ, ರೈತರಿಗೆ ಅನುಕೂಲಕರವಾದ ಮಾಹಿತಿ ಒದಗಿಸುವಂತಹ, ಹಾಗೂ ರೈತರು ಉತ್ಪಾದಿಸುವ ದವಸ ಧಾನ್ಯಗಳ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಪ್ರಕಾಶ್ ಪ್ರಿಯದರ್ಶನ್‌ ಸಲಹೆ ನೀಡಿದರು.

ಡಿ.25ರಂದು ಕ್ರಿಸ್ ಮಸ್ ದಿನವನ್ನು ವಿದೇಶಿ ಸಂಸ್ಕೃತಿಯಲ್ಲಿ ಆಚರಿಸುವ ಬದಲಾಗಿ ಸ್ವದೇಶಿಯ ಸಂಸ್ಕೃತಿಯಂತೆ ಹಬ್ಬ ಆಚರಿಸಬೇಕು, ವಿದೇಶೀ ಸಿಹಿ ಖಾಧ್ಯಗಳನ್ನು ಬಳಸಿ ಪರಿಸರಕ್ಕೆ ಎತೇಚ್ಚವಾದ ಕಸ ತ್ಯಾಜ್ಯ ಎಸೆದು ಪರಿಸರ ಹಾನಿ ಮಾಡಬಾರದು. ಬದಲಿಗೆ ನಮ್ಮ ರೈತರು ತಯಾರಿಸಿದ ಬೆಲ್ಲದ ಸಿಹಿ ಖಾಧ್ಯಗಳನ್ನು ಬಳಸಬೇಕು, ಸಸಿಗಳನ್ನು ಕಿತ್ತು ಬೊಕ್ಕೆ ಮಾಡೋ ಬದಲು ಪ್ರತಿಯೊಬ್ಬರು ಸಸಿ ನೆಟ್ಟು ಹಬ್ಬ ಆಚರಿಬೇಕು ಎಂದು ಅವರು ಮನವಿ ಮಾಡಿದರು.

ಪರಮಪೂಜ್ಯ ವಿಶುದ್ಧ ಶೀಲವರ್ಧನ ಬಂತೆ ಜಿ, ಮೆತ್ತ ಲೋಕದ ಪನ್ಯ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್ ,ವೀರಭದ್ರ ಸ್ವಾಮಿ, ಸುಬ್ರಮಣಿ,ಮಹದೇವ್,ಯಶ್ವಂತ್ ಕುಮಾರ್,ಮಹೇಶ್, ಮಹದೇವಸ್ವಾಮಿ, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.