ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನಾಡಗೀತೆಗೆ ಅಪಮಾನ ಮಾಡಲಾಗಿದ್ದು, ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಆಗ್ರಹಿಸಿದ್ದಾರೆ
ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ಭೇಟಿ ನೀಡಿ ಅಪರ ಜಿಲ್ಲಾಧಿಕಾರಿ ಡಾಕ್ಟರ್ ಶಿವರಾಜು ಅವರಿಗೆ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ನೇತೃತ್ವದಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನಾಡಗೀತೆಗೆ ಅಪಮಾನ ಮಾಡಿದ್ದು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಮನವಿ
ಮಾಡಿದರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್,
ರಾಷ್ಟ್ರಕವಿ ಕುವೆಂಪು ರವರು 1924ರಲ್ಲಿ ರಚಿಸಿದ ಜಯಭಾರತ ಜನನಿಯ ತನುಜಾತೆ ನಾಡಗೀತೆ ಶತಮಾನೋತ್ಸವ ಕಂಡಿದೆ, ಇದನ್ನ ಈ ಭಾರಿ ದಸರಾ ಕವಿಗೋಷ್ಠಿ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸಾವಿರ ಕಂಠಗಳ ಸಮೂಹ ಗಾಯನ ಮೂಲಕ ಮೈಸೂರು ಜಿಲ್ಲಾಡಳಿತ ತುಂಬಾ ಚೆನ್ನಾಗಿ ಆಯೋಜನೆ ಮಾಡಿ ನಾಡಗೀತೆಗೆ ಮತ್ತು ರಚಿಸಿದ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ರಾಗ ಸಂಯೋಜನೆ ಮಾಡಿದ ಮೈಸೂರು ಅನಂತಸ್ವಾಮಿ ರವರಿಗೆ ಗೌರವ ಸೂಚಿಸಿತು ಎಂದು ಹೇಳಿದರು.
ಆದರೆ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಪ್ರಾಧಿಕಾರದ ಅಧಿಕಾರಿಗಳಿಂದ ನಾಡಗೀತೆಗೆ ಪ್ರತಿದಿನ ಅಪಮಾನ ವಾಗುತ್ತಿದೆ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ 9ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಜೀಜ್ ಸೇಠ್ ಮ್ಯೂಸಿಕಲ್ ಫೌಂಟೇನ್ ಪ್ರದರ್ಶನದಲ್ಲಿ ರಾಷ್ಟ್ರಕವಿ ಕುವೆಂಪು ರಚಿಸಿದ ಜಯಭಾರತ ಜನನೀಯ ತನುಜಾತೆ ನಾಡಗೀತೆ ಹಾಡಿನ ಧ್ವನಿಸುರಳಿ ಶಿಷ್ಠಾಚಾರವಿಲ್ಲದೇ ಮನಸೋಯಿಚ್ಛೆ ಚಿತ್ರಗೀತೆಗಳ ಮಧ್ಯದಲ್ಲಿ ಪ್ರತಿದಿನ 4 ಭಾರಿ ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಜನಪ್ರತಿನಿಧಿಗಳ ಉಪಸ್ಥಿತರಿರುವ ಕಾರ್ಯಕ್ರಮಗಳು ಅಥವಾ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಅಥವಾ ಅಂತ್ಯದಲ್ಲಿ ಮಾತ್ರ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಮೈಸೂರು ಅನಂತಸ್ವಾಮಿ ಅವರ ರಾಗಸಂಯೋಜನೆಯ ದಾಟಿ 150sec ಸಮಯ ನಿಗಧಿಯ ಅಧಿಕೃತ ನಾಡಗೀತೆಯನ್ನ ಹಾಡಬೇಕು ಅಥವಾ ಅಧಿಕೃತ ನಾಡಗೀತೆ ಹಾಡಿನ ಧ್ವನಿಸುರಳಿ ಹಾಕಬೇಕು ಎಂದು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಮ ಗೊತ್ತಿಲ್ಲವೇ ಎಂದು ವಿನಯ್ ಕುಮಾರ್ ಪ್ರಶ್ನಿಸಿದರು.
ಅನ್ಯರು ಬೇರೆ ಶೈಲಿಯಲ್ಲಿ ಹಾಡಿರುವ 6ನಿಮಿಷದ ಹಾಡನ್ನ ಪ್ರಸಾರ ಮಾಡುತ್ತಿರುವುದು ನಾಡಗೀತೆಗೆ ಮತ್ತು ಕುವೆಂಪು ಅವರಿಗೆ ಮೈಸೂರು ಅನಂತಸ್ವಾಮಿ ಅವರಿಗೆ, ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಡುತ್ತಿರುವ ಅಪಮಾನ ಎಂದು ಹೇಳಿದರು
ಮೈಸೂರು ದಸರಾ ವಸ್ತುಪ್ರದರ್ಶನ ಉದ್ಘಾಟನೆ ದಿನವೇ ಮುಖ್ಯ ಮಂತ್ರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಿದ್ದ ವೇದಿಕೆಯಲ್ಲೇ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಇಲ್ಲದ ಹಾಡನ್ನ ಹಾಕಿ ಎಡವಟ್ಟು ಮಾಡಿದೆ ಪ್ರಾಧಿಕಾರ, ಸೆಪ್ಟಂಬರ್ 2ರಿಂದ ಇಲ್ಲಿಯವರೆಗೂ ಪ್ರತಿದಿನ 4ಭಾರಿ ನಾಡಗೀತೆ ಪ್ರಸಾರದ ಸಂಧರ್ಭದಲ್ಲಿ ಅಪಮಾನ ಮಾಡುತ್ತಿದ್ದು ಈ ಕೂಡಲೇ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಸರ್ಕಾರ ಅಧಿಕೃತ ಮಾಡಿರುವ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ಹಾಡನ್ನೇ ಪ್ರಸಾರ ಮಾಡಬೇಕು, ಇಲ್ಲವಾದಲ್ಲಿ ಕನ್ನಡಪರ ಸಂಘಟನೆಗಳು ಕನ್ನಡಿಗರ ಕಣ್ಣಿಗೆ ಗುರಿಯಾಗ ಬೇಕಾಗುತ್ತದೆ ಮುಂದಕ್ಕೆ ಆಗುವ ಸಮಸ್ಯೆಯನ್ನು ಈಗಲೇ ಸರಿಪಡಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮುಖಂಡರಾದ ರಮೇಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷರಾದ ಎಸ್ಎನ್ ರಾಜೇಶ್, ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.