ಇವಿಎಂ ಹ್ಯಾಕ್‌ನಿಂದ ಮಹಾರಾಷ್ಟ್ರ ಕಳೆದುಕೊಂಡೆವು:ಪರಮೇಶ್ವರ್

Spread the love

ಬೆಂಗಳೂರು: ಇವಿಎಂ ಹ್ಯಾಕ್‌ನಿಂದ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನಿಸುತ್ತಿದೆ ಎಂದು
ಗೃಹ ಸಚಿವ ಜಿ. ಪರಮೇಶ್ವರ್‌ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾವುಸ್ಟ್ರಾಟಜಿ ಮಾಡುವುದರಲ್ಲೂ ಸೋತಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ನಾವು ಅಗಾಡಿ ಬರುತ್ತದೆ ಎಂದುಕೊಂಡಿದ್ದೆವು. ಆದರೆ ಎಲ್ಲವೂ ಉಲ್ಟಾ ಆಗಿದೆ. ಅಶೋಕ್ ಗೆಹ್ಲೋಟ್, ಭಗೇಲ್ ಸೇರಿ ಅನುಭವಿ ಸಿಎಂಗಳ ಜತೆ ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆ ಆಗಿದೆ, ಆದರೆ ಜಾರ್ಖಂಡ್‌ನಲ್ಲಿ ಯಾಕೆ ಹಾಗಾಗಲಿಲ್ಲ ಬಿಜೆಪಿಯವರು ಪ್ಲ್ಯಾನ್ ಆಫ್ ಆಕ್ಷನ್ ತರಹ ಇದನ್ನು ಮಾಡ್ತಾರೆ ಎಂದು ದೂರಿದರು.

ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಲವು ಗೆದ್ದೆ ಗೆಲ್ತಿವಿ ಅನ್ನೋ ಕಡೆ ಬಿಡ್ತಾರೆ. ಇದರೊಂದಿಗೆ ಲಾಡ್ಲಿ ಬೆಹಿನ್ ಯೋಜನೆ ಸಾಕಷ್ಟು ಇಂಪ್ಯಾಕ್ಟ್ ಅಗಿದೆ. ಅವರು 6 ತಿಂಗಳು ಮೊದಲು ಕೊಟ್ಟರು, ಇದೆಲ್ಲವೂ ಅವರ ಕೈ ಹಿಡಿದಿದೆ. ನಾವು ಕೊನೆಗೆ ಟಿಕೆಟ್ ಘೋಷಣೆ ಮಾಡಿದ್ವು, ಪಕ್ಷದಲ್ಲೂ ಗೊಂದಲ ಆಯ್ತು. ಶರದ್‌ ಪವಾರ್ ಗುಂಪು, ಉದ್ದವ್ ಠಾಕ್ರೆ ಗುಂಪಿನ ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ವಿದರ್ಭದಲ್ಲಿ ಹೆಚ್ಚು ಸೀಟು ಬರಲಿಲ್ಲ. ಎಲ್ಲಿಯವರೆಗೆ ಇವಿಎಂ ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದು ಪರಮೇಶ್ವರ್ ತಿಳಿಸಿದರು.