ಮೈಸೂರು: ಮೈಸೂರಿನ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಬೆಂಗಳೂರಿನ ಹೆಚ್ ಜಿ ಸಿ ಇಂಡಿಯಾ ಕಂಪನಿ ವತಿಯಿಂದ ಸರ್ ಎಂ ವಿಶ್ವೇಶ್ವರಯ್ಯ ಅವರ 163 ನೇ ಜಯಂತಿ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಕುವೆಂಪುನಗರದ ನಿವಾಸಿ ರೂಪದರ್ಶಿ ಹಾಗೂ ಇಂಜಿನಿಯರ್ ರೇಣುಕಾ ಹೊರಕೇರಿ ಅವರಿಗೆ ಸರ್ ಎಂ ವಿಶ್ವೇಶ್ವರಯ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೇಣುಕಾ ಹೊರಕೇರಿ,ನಾಡಿನ ಅಭಿವೃದ್ಧಿಯ ಚಿಂತನೆಗಳ ಹಿಂದಿರುವ ಪ್ರೇರಕಶಕ್ತಿ ವಿಶ್ವೇಶ್ವರಯ್ಯನವರು ಎಂಜಿನಿಯರ್‌ಗಳು ಅವರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂಜಿನಿಯರ್ ಅಧಿಕಾರಿಗಳಾದ ಹಸೀನಾ.ಕೆ, ಸಂಧ್ಯಾ ಎಲ್. ವಿ, ನರೇಂದ್ರ ನಾಯಕ್, ಶಶಿಕುಮಾರ್ ಎಚ್ ವಿ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.