ಮೈಸೂರು: ಜಮೀನಿಗೆ ನೀರು ಹಾಯಿಸಲು ಹೋಗಿದ್ದ ಯುವಕನ ಮೇಲೆ ಆನೆಗಳು ದಾಳಿ ಮಾಡಿದ ಪರಿಣಾಮ ಆತ ಮೃತಪಟ್ಟ ಘಟನೆ
ಸರಗೂರು ತಾಲೂಕಿನಲ್ಲಿ ನಡೆದಿದೆ.
ಸರಗೂರು ತಾಲೂಕು ಗದ್ದೆ ಹಳ್ಳ ಗ್ರಾಮದ ಅವಿನಾಶ್ (24)ಆನೆ ದಾಳಿಗೆ ಬಲಿಯಾದ ಯುವಕ.
ಸರಗೂರು ತಾಲೂಕಿನ ಗದ್ದೆ ಹಳ್ಳ ಗ್ರಾಮದಲ್ಲಿ ಬೆಳಗಿನ ಜಾವಾ ನೀರು ಹಾಯಿಸಲು ಮೋಟಾರ್ ಆನ್ ಮಾಡಲು ಜಮೀನಿಗೆ ತೆರಳುತ್ತಿದ್ದ ವೇಳೆ ಐದು ಆನೆಗಳ ಗುಂಪು ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿವೆ.
ಈ ವೇಳೆ ಮಾತನಾಡಿದ ಮೃತ ಅವಿನಾಶ್ ಸಂಬಂಧಿಕರು ಈ ಘಟನೆಗೆ ಅಧಿಕಾರಿಗಳೇ ನೇರ ಕಾರಣ ರಾತ್ರಿ ವೇಳೆ ವಿದ್ಯುತ್ ನೀಡುವುದರಿಂದ ಈ ರೀತಿ ಸಾಕಷ್ಟು ಸಾವು ನೋವು ಆಗುತ್ತಿದೆ. ರೈತರಿಗೆ ತುಂಬಾ ತೊಂದರೆಯಾಗುತ್ತಿದೆ, ಇನ್ನು ಮುಂದಾದರು ಬೆಳಗಿನ ಸಮಯದಲ್ಲಿ ವಿದ್ಯುತ್ ನೀಡಿ ರೈತರ ಪ್ರಾಣ ಉಳಿಸಬೇಕೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೃತ ರೈತ ಅವಿನಾಶ್ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಮುಂದೆ ಈ ರೀತಿ ಅವಘಡಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.