ಮೈಸೂರು: Elepಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಂಬಾರ ಕೊಪ್ಪಲು ಆರೋಗ್ಯ ಕೇಂದ್ರದ ವತಿಯಿಂದ ಆನೆ ಕಾಲು ರೋಗದ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರಕ್ಕೆ ಚಾಮರಾಜ ಕ್ಷೇತ್ರದ ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ನ ರವಿ ಮಂಚೇಗೌಡನ ಕೊಪ್ಪಲು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರವಿ ಅವರು, ವೈಜ್ಞಾನಿಕ ಯುಗದಲ್ಲಿ ಎಲ್ಲಾ ಕಾಯಿಲೆಗಳಿಗೂ ಸೂಕ್ತ ಚಿಕಿತ್ಸೆ ದೊರಕುತ್ತಿದೆ ಅದರ ಸದುಪಯೋಗವಾಗಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಹಿಂದೆ ಕೆಲವು ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆಗಳು ದೊರಕುತ್ತಿರಲಿಲ್ಲ ಹಾಗಾಗಿ ಸಾವು ನೋವು ಒಪ್ಪಿಕೊಳ್ಳುವ ಪರಿಸ್ಥಿತಿ ಇತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಆನೆಕಾಲು ರೋಗಕ್ಕೂ ಕೂಡ ಚಿಕಿತ್ಸೆ ಇದೆ. ಇಂತಹ ಶಿಬಿರಗಳು ತುಂಬಾ ಉಪಯೋಗ ಎಂದು ತಿಳಿಸಿದರು.
ಈ ರೋಗವನ್ನು ಪತ್ತೆ ಹೆಚ್ಚಲು ರಕ್ತ ಶೇಖರಣೆಯನ್ನು ಮಾಡುವುದು ಒಂಬತ್ತು ಗಂಟೆಯ ನಂತರ ಶಿಬಿರದಲ್ಲೆ ಮಾಹಿತಿಯನ್ನು ಕೊಡುತ್ತಿರುವ ಕಾರ್ಯಕ್ರಮ ತುಂಬಾ ಉಪಯೋಗವಾಗಿದೆ, ರಾಜ್ಯ ಸರ್ಕಾರ ಆರೋಗ್ಯ ಕೇಂದ್ರಗಳಿಗೆ ಉತ್ತೇಜನವನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಎಲ್ಲಿ ಆನೆಕಾಲು ರೋಗಿ ಇರುತ್ತಾರೋ ಕೂಡಲೇ ಸಂಬಂಧಪಟ್ಟ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ಕೊಟ್ಟು ಅವರಿಗೆ ಧೈರ್ಯ ತುಂಬುವಂತಹ ಕೆಲಸವನ್ನ ನಾವೆಲ್ಲರೂ ಮಾಡಬೇಕಾಗಿದೆ ಸಾರ್ವಜನಿಕರು ಇದಕ್ಕೆ ಕೈಜೋಡಿಸಬೇಕು ಎಂದು ರವಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾಕ್ಟರ್ ರಮ್ಯ,
ಮಹದೇಶ್ವರ ಬಡಾವಣೆಯ ಕಾಂಗ್ರೆಸ್ ಮುಖಂಡರಾದ ಮಹೇಶ್ , ರೇಖಾ, ಉಷಾ, ಆರೋಗ್ಯ ಕೇಂದ್ರದ ವೈದ್ಯರು, ದಾದಿಯರು ಉಪಸ್ಥಿತರಿದ್ದರು.