ಆನೆಕಂದಕಕ್ಕೆ ಬಿದ್ದು ಆನೆ ದುರ್ಮರಣ

Spread the love

ಮೈಸೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿ ಆನೆಯೊಂದು ಆನೆಕಂದಕಕ್ಕೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ಆನೆಗಳ ಹಾವಳಿಯಿಂದ ಮುಕ್ತವಾಗಲು ನಿರ್ಮಿಸಿರುವ ಆನೆ ಕಂದಕಕ್ಕೆ ಬಿದ್ದು ಈ ಗಜ ಮೃತಪಟ್ಟಿದೆ.

ಕಂದಕದಲ್ಲಿ ಬಿದ್ದು ಘೀಳಿಡಿತ್ತಿದ್ದ ಆನೆಯನ್ನು ಗಮನಿಸಿ ಸ್ಥಳೀಯರು ಓಂಕಾರ ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಷ್ಟರಲ್ಲಿ ಪಾಪದ ಆನೆ
ಮೃತಪಟ್ಟಿತ್ತು.

ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿ ಎ ಸಿ ಎಫ್ ಪ್ರಭಾಕರ್, ಆರ್ ಎಫ್ ಒ ನಿತಿನ್ ಕುಮಾರ್ ಹಾಗೂ ಓಂಕಾರ ಅರಣ್ಯ ಇಲಾಖೆಯ ವೈಲ್ಡ್ ಲೈಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಜೆಸಿಬಿ ಮೂಲಕ ಮೃತ ಆನೆಯನ್ನ ಮೇಲಕ್ಕೆ ಎತ್ತಿ ಮುಂದಿನ ಕ್ರಮ ಕೈಗೊಂಡರು.