ಮೈಸೂರು: ಸಾಮಾನ್ಯವಾಗಿ ಗಾಳಿಪಟ ಹಾರಿಸುವವರು ತಮ್ಮಷ್ಟಕ್ಕೆ ಎಲ್ಲೆಂದರಲ್ಲಿ ಹಾರುಸುವುದರಿಂದ ಅದರ ದಾರ ಪಕ್ಷಿಗಳಿಗೆ ಉರುಳಾಗಿ ಮಾರಕವಾಗುತ್ತಿದೆ.
ಮೈಸೂರಿನಲ್ಲಿ ಹೀಗೆ ಗಾಳಿಪಟ ದಾರಕ್ಕೆ ಹದ್ದು ಸಿಲಕ್ಕಿಕೊಂಡು ಪ್ರಾಣ ಸಂಕಟದಲ್ಲಿ ಒದ್ದಾಡುತ್ತಿದ್ದುದನ್ನು ಸೂರಜ್ ಎಂಬವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಮಂಡಿ ಮೊಹಲ್ಲಾದ ನಿವಾಸಿ ಸೂರಜ್ ಅವರ ನಿವಾಸದ ಕಾಂಪೌಂಡ್ ಬಳಿ
ಗಾಳಿಪಟದ ದಾರಕ್ಕೆ ಹದ್ದೊಂದು ಸಿಲುಕಿ ಬಿಡಿಸಿಕೊಳ್ಳಲಾಗದೆ ಪ್ರಾಣ ಸಂಕಟದಲ್ಲಿ ಒದ್ದಾಡುತ್ತಿತ್ತು.ಹದ್ದನ್ನು ಆಕಸ್ಮಿಕವಾಗಿ ಗಮನಿಸಿದ ಸೂರಜ್ ಅವರು ಇಡೀ ಮೈ,ಮತ್ತು ಕತ್ತಿಗೆ ಸುತ್ತಿಕೊಂಡಿದ್ದ ದಾರವನ್ನು ಜೋಪಾನವಾಗಿ ಬಿಡಿಸಿ ಹದ್ದಿನ ಪ್ರಾಣ ಕಾಪಾಡಿ ರಕ್ಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸೂರಜ್ ಅವರು, ಗಾಳಿಪಟ ಹಾರಿಸುವಾಗ ಎಚ್ಚರ ವಹಿಸಬೇಕು, ದಾರಗಳನ್ನು ಎಲ್ಲೆಂದರಲ್ಲಿ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ.
ಬಹಳಷ್ಟು ಹುಡುಗರು ಗಾಳಿಪಟ ಹಾರಿಸಿ ನಂತರ ದಾರ ಎಲ್ಲೆಂದರಲ್ಲಿ ಬಿಟ್ಟು ಹೋಗಿರುತ್ತಾರೆ.ಈ ದಾರ ಕೇಬಲ್ ವಯರ್,ವಿದ್ಯುತ್ ವಯರ್,ಮರಗಳು ಹೀಗೆ ಎಲ್ಲಾ ಕಡೆ ನೇತಾಡುತ್ತವೆ.
ಈ ದಾರ ಪುಟ್ಟ ಪಕ್ಷಿ ಪ್ರಾಣಿಗಳಿಗೆ ಉರುಳಾಗಿ ಅವುಗಳ ಪ್ರಾಣಕ್ಕೆ ಕುತ್ತು ತರುತ್ತಿದೆ,ಯಾರೂ ಗಾಳಿಪಟದ ದಾರವನ್ನು ಅಲ್ಲೇ ಬಿಡಬಾರದು ಪ್ರತಿಯೊಂದು ಪ್ರಾಣಿ,ಪಕ್ಷಿಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಸೂರಜ್ ಮನವಿ ಮಾಡಿದ್ದಾರೆ.