ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿಕೆ

Spread the love

ಮೈಸೂರು: ಮೈಸೂರಿನ ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿದಿದೆ.

ಶನಿವಾರ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ನೀಡಲಾಗಿರುವ ಹದಿನಾಲ್ಕು ನಿವೇಶನಗಳ ದಾಖಲಾತಿಯಲ್ಲಿ ಒಂದು ಪತ್ರಕ್ಕೆ ವೈಟ್ನರ್ ಹಾಕಿರುವ ಕುರಿತು ಮಾಹಿತಿ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

ವೈಟ್ನರ್ ಹಿಂದೆ ಇರುವ ಪದಗಳ ಬಗ್ಗೆ ಇಡಿ ಅಧಿಕಾರಿಗಳು ಮೂಡ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಮೂಲ ದಾಖಲಾತಿಯನ್ನು ನೀಡುವಂತೆ ಇಡಿ ಅಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬದಲಿ ನಿವೇಶನಕ್ಕೆ ಯಾರು,ಯಾರು ಶಿಫಾರಸು ಮಾಡಿದ್ದಾರೆ,ಮೂಡದಲ್ಲಿ ಈ ನಿವೇಶನಕ್ಕಾಗಿ ಶಿಫಾರಸು ಮಾಡಿರುವ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

ಮೂಡ ಆಯುಕ್ತ ರಘು ನಂದನ್ ಅವರು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮುಡಾ ಕಚೇರಿ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.