ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸುಬ್ಬರಾಯನಕೆರೆ ವಾರ್ಡ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶುಲ್ಕರಹಿತ ಇ-ಆಸ್ತಿ ಖಾತಾ ಮಾಡಿಕೊಡುವ ಅಭಿಯಾನವನ್ನು ಬಹಳಷ್ಟು ಜನರು ಸದುಪಯೋಗಪಡಿಸಿಕೊಂಡರು.
ಶಾಸಕ ಹರೀಶ್ ಗೌಡ ಅವರು ಪಾಲಿಕೆ ಆಯುಕ್ತರೊಂದಿಗೆ ಸಭೆ ನಡೆಸಿ ವಲಯ ವ್ಯಾಪ್ತಿಗಳಲ್ಲಿ ಬರುವ ವಾರ್ಡಿನ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಆಸ್ತಿ ಖಾತಾ ಮಾಡಿಕೊಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಪ್ರಸ್ಥಾಪಿಸಿದ್ದರು.

ಅದಕ್ಕೆ ಸ್ಪಂದಿಸಿದ ಮೈಸೂರು ಮಹಾನಗರ ಪಾಲಿಕೆ 23 ನೆ ವಾರ್ಡ್ ಸುಬ್ಬರಾಯನ ಕೆರೆ ಪ್ರದೇಶದಲ್ಲಿ ಇಂದು ಶುಲ್ಕರಹಿತ ಇ-ಆಸ್ತಿ ಖಾತಾ ಅಭಿಯಾನವನ್ನು ಅಯೋಜಿಸಿದ್ದು ಯಶಸ್ವಿಯಾಯಿತು.
ಈ ಅಭಿಯಾನಕ್ಕೆ ವಾರ್ಡಿನ ನಿವಾಸಿಗಳು,ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ ಅಲ್ಲದೆ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಅಭಿಯಾನದಲ್ಲಿ ಅಧಿಕಾರಿಗಳಾದ ಅರಸು ಕುಮಾರಿ ಸಿದ್ದರಾಜು, ಕುಪ್ಪುರಾಜ್ ಮತ್ತಿಯರರು ಕಾರ್ಯ ನಿರ್ವಹಿಸಿದರು.