Skip to content
October 16, 2025

  • Home
  • ರಾಜ್ಯ
  • ದೇಶ
  • ವಿದೇಶ
  • ಜಿಲ್ಲೆ
  • ಕ್ರೈಂ
  • ಸಿನಿಮಾ
  • Video
  • Contact Us
Main Menu
ರಾಜ್ಯ

ಇ ಖಾತಾ ವ್ಯವಸ್ಥೆ ಸರಳೀಕರಣಗೊಳಿಸಿ: ಆರ್.ಅಶೋಕ ಆಗ್ರಹ

November 15, 2024November 15, 2024 - by Varshini News
Spread the love

ಬೆಂಗಳೂರು: ಇ ಖಾತಾ ವ್ಯವಸ್ಥೆಯನ್ನು ಸರ್ಕಾರ ಸರಳೀಕರಣಗೊಳಿಸಬೇಕು ಎಂದು
ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಾವುದೇ ಲಂಚವಿಲ್ಲದೆ ಜನರು ಸುಲಭವಾಗಿ ಸೇವೆ ಪಡೆಯುವಂತಾಗಬೇಕು ಎಂದು ಹೇಳಿದರು.

ಸರ್ಕಾರ ಇ ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು, ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ಈಗಾಗಲೇ ಅಪ್‌ಲೋಡ್‌ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್‌ ಮಾಡಬೇಕಿದೆ ಈ ಯಾವ ಕೆಲಸಗಳೂ ಆಗಿಲ್ಲ ಎಂದು ಅಶೋಕ್ ದೂರಿದರು.

ಜನರಿಗೆ ಮನೆ ಸಾಲ ಸಿಗಲು ಇ ಖಾತಾ ಬೇಕಾಗುತ್ತದೆ. ದಿನಕ್ಕೆ 5 ರಿಂದ 6 ರಷ್ಟು ಇ ಖಾತಾ ಮಾಡಲಾಗುತ್ತಿದೆ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು, ಯಾವುದೇ ಲಂಚವಿಲ್ಲದೆ ಇ ಖಾತಾ ವರ್ಗಾವಣೆಯಾಗಬೇಕು ಎಂದು ತಿಳಿಸಿದರು.

TaggedBangaluruE AccountR.Ashok

Related Posts

ಪ್ರಿಯಾಂಕ್‌ ಖರ್ಗೆ ಅವರಿಗೆ ಬಂದಿದೆ ಎನ್ನಲಾಗಿರುವ ಬೆದರಿಕೆ ಕರೆಗಳು ಸುಳ್ಳು:ವಿಶ್ವನಾಥ್

October 16, 2025October 16, 2025

ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ಅನ್ನ ವೇಸ್ಟ್ ಆಗುತ್ತಿದೆ-ಸಿಎಂ ಕಳವಳ

October 16, 2025October 16, 2025

ಮತ್ತೆ ಬರುತ್ತಿದೆ ಅವಳ ಹೆಜ್ಜೆ ಕಿರುಚಿತ್ರೋತ್ಸವ

October 16, 2025October 16, 2025

Post navigation

Previous Article ಅತಿ ಚಿಕ್ಕ ವಯಸ್ಸಿನಲ್ಲೇ ಇಂಟರ್ ನ್ಯಾಷನಲ್ ರೆಕಾರ್ಡ್ಸ್ ‌ಮಾಡಿದ ಪುಟ್ಟ ವಿಹಿಕಾ
Next Article ಜಮೀರ್ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ

About Varshini News

View all posts by Varshini News →

Varshini News you Tube Channel

Latest Posts

  • ಪ್ರಾಂಶುಪಾಲರಾಗಿ ಮಾಡುವ ಭರವಸೆ ನೀಡಿ ವಂಚನೆ:ಸಿಎಆರ್ ಮುಖ್ಯಪೇದೆ ವಿರುದ್ಧ ಪ್ರಕರಣ
  • ಕಡೆಗೂ ಹುಣಸೂರು ನಗರಸಭೆ ಮೈದಾನದಿಂದ ವಸ್ತುಪ್ರದರ್ಶನ ಎತ್ತಂಗಡಿ
  • ಸಮೂಹ ಶ್ರಮದಿಂದ ಶ್ರೇಷ್ಟ ಫಲಿತಾಂಶಗಳಿಸಲು ಸಾಧ್ಯ-ಜಾರ್ಜ್ ಫ್ಯಾನ್ಸಿಸ್
  • ದಸರಾ ಮನೆಮನೆ ಗೊಂಬೆ ಸ್ಪರ್ಧಿಗಳಿಗೆ ಬಹುಮಾನ ವಿತರಣೆ
  • ಪ್ರಿಯಾಂಕ್‌ ಖರ್ಗೆ ಅವರಿಗೆ ಬಂದಿದೆ ಎನ್ನಲಾಗಿರುವ ಬೆದರಿಕೆ ಕರೆಗಳು ಸುಳ್ಳು:ವಿಶ್ವನಾಥ್
Copyright © 2025 .
Powered by WordPress and HitMag.