ಮೈಸೂರು: ನಾಡ ಹಬ್ಬ ದಸರಾ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಹಣ್ಣುಗಳು, ಲೇಖನಿ ಸಾಮಗ್ರಿ ವಿತರಣೆ ಮಾಡಲಾಯಿತು.
ಮೈಸೂರಿನ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ರಾಮ ಅಯ್ಯರ್ ರಸ್ತೆ,ಕೃಷ್ಣಮೂರ್ತಿ ಪುರಂ ನಲ್ಲಿರುವ ಶಾರದ ನೆಲೆ ವಿದ್ಯಾರ್ಥಿನಿಯರ ನಿಲಯದ ಬಂಧುಗಳಿಗೆ ಹಣ್ಣುಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ನಾಡಹಬ್ಬ ದಸರಾವನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾರದಾ ನೆಲೆಯ ಸದಸ್ಯರಾದ ಅಡ್ವಕೇಟ್ ಸಿ.ಜೆ. ರಾಘವೇಂದ್ರ, ವಾರ್ಡನ್ ರೇವತಿ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ವೀರಭದ್ರ ಸ್ವಾಮಿ, ಸುಬ್ರಮಣ್ಯ, ಚಂದ್ರಶೇಖರ್, ಮಹೇಶ್, ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.