ಅನಧಿಕೃತವಾಗಿ ಡ್ರೋನ್ ವಿಡಿಯೋ ಚಿತ್ರೀಕರಣ: ಕಠಿಣ ಕ್ರಮ

Spread the love

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೆಸ್ಕ್ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನವು ಸೆ.28, 29 ಹಾಗೂ ಅ.1 ಮತ್ತು 2ರಂದು ನಡೆಯಲಿದೆ.

ಆದರೆ ಡ್ರೋನ್ ಪ್ರದರ್ಶನ ನಡೆಯುವ ವೇಳೆ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಮ್ಮ ಡ್ರೋನ್‌ಗಳನ್ನು ಹಾರಿಸಿ ಸೆಸ್ಕ್‌ ವತಿಯಿಂದ ನಡೆಸಲಾಗುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಸೆರೆಹಿಡಿಯುವುದು ಹಾಗೂ ಡ್ರೋನ್‌ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಕ್ಕೆ ನಿರ್ಬಂಧ ಹೇರಲಾಗಿದೆ.

ಒಂದು ವೇಳೆ ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಡ್ರೋನ್‌ಗಳ ಮೂಲಕ ಚಿತ್ರೀಕರಿಸಿ, ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದು ಕಂಡುಬಂದಲ್ಲಿ ಅವರುಗಳ ವಿರುದ್ಧ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮಕೈಗೊಳ್ಳಲಾಗಯವುದು ಎಂದು ಸೆಸ್ಕ್ ‌ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸಂಸ್ಥೆಗಳು ಸೆಸ್ಕ್ ವತಿಯಿಂದ ನಡೆಸಲಾಗುತ್ತಿರುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಡ್ರೋನ್‌ಗಳ ಮೂಲಕ ಅನಧಿಕೃತವಾಗಿ ಚಿತ್ರೀಕರಣ ಮಾಡದಂತೆ ಎಚ್ಚರಿಸಲಾಗಿದೆ.