ಮೈಸೂರು: ನಾಡಹಬ್ಬ ದಸರಾದಲ್ಲಿ ವಿಶ್ವ ವಿಖ್ಯಾತ ಜಂಬೂಸವಾರಿ ಪ್ರಮುಖ ಆಕರ್ಷಣೆಯಾಗಿದೆ.
ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಗಳಿಗೂ ಅಷ್ಟೇ ಪ್ರಾಮುಖ್ಯತೆ ಇದೆ,ಆದರೆ ದಸರಾ ಮುಗಿದ ಕೂಡಲೇ ಎಲ್ಲರೂ ಮರೆತೇ ಬಿಡುತ್ತಾರೆ.
18 ಬಾರಿ ಅಂಬಾರಿ ಹೊತ್ತ ಆನೆ ದ್ರೋಣ ಹಾಗೂ 3 ಬಾರಿ ಅಂಬಾರಿ ಹೊತ್ತ ರಾಜೇಂದ್ರ ಆನೆಗಳ ಸಮಾಧಿಗಳನ್ನೇನೊ ನಿರ್ಮಿಸಲಾಗಿದೆ.
ಸಮಾಧಿಗಳನ್ನು ಹೆಚ್.ಡಿ ಕೋಟೆ ತಾಲೂಕು ಬಳ್ಳೆಹಾಡಿ ಗ್ರಾಮದಲ್ಲಿ ನಿರ್ಮಿಸಲಾಗಿದೆ.
ರಾಜೇಂದ್ರ ಆನೆಯನ್ನು ಗಂಧದಗುಡಿ ಸಿನಿಮಾದಲ್ಲಿ ಕೂಡಾ ಬಳಸಿಕೊಳ್ಳಲಾಗಿತ್ತು.
ಆದರೆ ಜಂಬೂಸವಾರಿ ಯಶಸ್ವಿಯಾಗಿ ನಡೆಸಿಕೊಟ್ಟ ದ್ರೋಣ ಮತ್ತು ರಾಜೇಂದ್ರನಿಗೆ ಪ್ರತಿವರ್ಷ ಗೌರವ ಸಲ್ಲಿಸಬೇಕು.
ಜತೆಗೆ ಈ ಆನೆಗಳ ಸಾಮಾಧಿ ಸ್ಥಳಗಳನ್ನು ಅಭಿವೃದ್ಧಿಮಾಡಿ ಅವುಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ.
ದಸರಾ ಮಹೋತ್ಸವ ಹತ್ತಿರ ಬರುತ್ತಿದೆ ತಕ್ಷಣವೇ ದ್ರೋಣ ಮತ್ತು ರಾಜೇಂದ್ರನ ಸಮಾಧಿಗಳಿಗೆ ಕಾಯಕಲ್ಪ ನೀಡಿ ಪೂಜೆ ಸಲ್ಲಿಸುವ ಕಾರ್ಯವಾಗಲಿ.