ಕುಡಿದು ವಾಹನ ಚಾಲನೆ;ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ: ೩೯ ಪ್ರಕರಣ ದಾಖಲು

Spread the love

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಎಸ್ಪಿ ಬಿ.ಟಿ. ಕವಿತಾ ಅವರ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಒಟ್ಟು ೩೯ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಪೊಲೀಸ್ ಸಿಬ್ಬಂದಿ ಕಾರ್ಯಚರಣೆ ನಡೆಸಿ, ಚಾಮರಾಜನಗರದ ಒಟ್ಟು ೧೬ ಠಾಣೆಗಳ ಪೈಕಿ ಚಾಮರಾಜನಗರ ಗ್ರಾಮಾಂತರ, ಪೂರ್ವ ಗ್ರಾಮಾಂತರ,ಕುದೇರು,ಮಹದೇಶ್ವರ ಬೆಟ್ಟದ ಠಾಣೆ ಹೊರತುಪಡಿಸಿದರೆ ಚಾ.ನಗರ ಪಟ್ಟಣದಲ್ಲಿ ೪, ಸಂತೆಮರಳ್ಳಿ ೨,ಸಂಚಾರಿ ಠಾಣೆ೨,ಗುಂಡ್ಲುಪೇಟೆ ೨,ಬೇಗೂರು೨,ತೆರಕಣಾಂಬಿ೨,ಯಳಂದೂರು,ಮಾಂಬಳ್ಳಿ ತಲಾ ೩ ಪ್ರಕರಣ, ಕೊಳ್ಳೆಗಾಲ ಪಟ್ಟಣ೬,ಕೊಳ್ಳೆಗಾಲ ಗ್ರಾಮಾಂತರ೪,
ಹನೂರು ೭,ರಾಮಾಪುರದಲ್ಲಿ ೨ ಸೇರಿ ೩೯ ಪ್ರಕರಣ ದಾಖಲಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಪಾಲ್ಗೊಂಡರೆ, ಪಟ್ಟಣದೊಳಗೆ ಸ್ವತಃ ಎಸ್ಪಿ ಬಿ.ಟಿ.ಕವಿತಾ ಅವರೇ ಹಾಜರಿದ್ದು ಅದಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.