ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ವತಿಯಿಂದ ದಸರಾ ಹಬ್ಬದ ಅಂಗವಾಗಿ ಎಲ್ ಕೆ ಜಿ ಯಿಂದ 9ನೇ ತರಗತಿ ವರೆಗಿನ ಮಕ್ಕಳಿಗೆ ದಸರಾ ಆನೆ ಹಾಗೂ ಗಣೇಶ ಗೌರಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು
ಏರ್ಪಡಿಸಲಾಗಿದೆ.

ಒಟ್ಟು 4 ವಿಭಾಗದಲ್ಲಿ ಮಕ್ಕಳಿಗೆ ದಸರಾ ಆನೆ ಹಾಗೂ ಗಣೇಶ ಗೌರಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸೆ. 28ರಂದು ಬೆಳಗ್ಗೆ 9.30ಕ್ಕೆ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆ ಯಲ್ಲಿರುವ ಕಚೇರಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರತಿ ವಿಭಾಗಕ್ಕೂ 3ಬಹುಮಾನ ಇರುತ್ತದೆ ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪದಕ ಹಾಗೂ ಅಭಿನಂದನಾ ಪತ್ರ ನೀಡಲಾಗುತ್ತದೆ ಎಂದು ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷೆ ಪುಷ್ಪ ತಿಳಿಸಿದ್ದಾರೆ.
ಹೆಸರು ನೋಂದಾಯಿಸಿಕೊಳ್ಳಲು 9035864203/9035004203 ಸಂಪರ್ಕಿಸಬಹುದು ಅವರು ತಿಳಿಸಿದ್ದಾರೆ.