ಮೈಸೂರು: ಡ್ರಾಮಾ ಜೂನಿಯರ್ ಖ್ಯಾತಿಯ ಆರ್ಯನ್ ರಂಜನ್ ಗೌಡ ಅವರು ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆರ್ಯನ್ ಕೆ.ಆರ್ ನಗರ ತಾಲೂಕು, ಬಸವರಾಜಪುರದ ಮಗು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗುವಾಗಿದ್ದಾಗಿನಿಂದ ಆರ್ಯನ್ ತುಂಬಾ ಚುರುಕಾಗಿದ್ದ, ಕನ್ನಡವನ್ನು ಸ್ಪಷ್ಟವಾಗಿ ಮಾತಾಡುತ್ತಿದ್ದ,ಶಿಶು ಗೀತೆಗಳನ್ನು ಹಾಡುತ್ತಿದ್ದ,ಸಂಸ್ಕೃತ ಶ್ಲೋಕಗಳನ್ನು ಮೂರು-ನಾಲ್ಕನೇ ವಯಸ್ಸಿನಲ್ಲಿ ನೆನಪಿಟ್ಟುಕೊಂಡು ಪಠಿಸುತ್ತಿದ್ದ.
ಯುಕೆಜಿ ಓದುವಾಗಲೆ ಫ್ರೋ. ಕೃಷ್ಟೇಗೌಡ ಅವರ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಭಾಗವಹಿಸಿದ್ದ, ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಸುಲಲಿತವಾಗಿ ಇಂಗ್ಲಿಷ್ ಭಾಷಣ ಮಾಡಿ ಮೆಚ್ಚುಗೆ ಪಡೆದಿದ್ದ.

ಅಲ್ಲದೆ ಎಸ್ ವಿ ಇ ಐ ಶಾಲೆಯಲ್ಲಿ ಶಾಲಾಪೂರ್ವಶಿಕ್ಷಣದ ಅವಧಿಯಲ್ಲಿ ಅವನ ಭಾಷಣದ ಫ್ರೌಡಿಮೆಗೆ ಮೆಚ್ಚಿ ‘LITERARY CHAMP’ಎಂದು ಸ್ಮರಣಿಕೆ ನೀಡಿ ಶಾಲೆಯವರು ಗೌರವಿಸಿದ್ದಾರೆ.
ಸಂಗೀತ-ನೃತ್ಯದಲ್ಲಿ ಆಸಕ್ತಿ ಇದ್ದು ಶಾಲಾ ವಾರ್ಷಿಕೋತ್ಸವಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾನೆ.
ಅಭಿನಯದ ಕಡೆಗೆ ಆಸಕ್ತಿ ಇದ್ದುದರಿಂದ ರಂಗ ತರಬೇತಿಯನ್ನು ಪಡೆದು ಹಲೋ ಯಮ,ಪೈಲ್ವಾನ್ ಪರದಾಟ,
ಕಂಸಾಯಣ,ಪಂಚತಂತ್ರ, ಅಳಿಲು,
ಹೀಗೆ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರ ನಿವರ್ಹಿಸಿ ಮೆಚ್ಚುಗೆ ಪಡೆದಿದ್ದಾನೆ.
ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ,ಡ್ರಾಮಾ ಜ್ಯೂನಿಯರ್-5ರಲ್ಲಿ ಮೈಸೂರಿನಿಂದ ಆಯ್ಕೆ ಯಾಗಿ ಸುಮಾರು 15 ವಾರಗಳ ಕಾಲ ಇದ್ದು,ಹಲವಾರು ಎಪಿಸೋಡ್ ಗಳಲ್ಲಿ ನಟಿಸಿ, ಗುರುತಿಸಿ ಕೊಂಡಿದ್ದಾನೆ.
ಅಷ್ಟೇ ಅಲ್ಲಾ ಆರ್ಯ ಓದಿನಲ್ಲೂ ಪ್ರತಿಭಾವಂತ.ಇತ್ತೀಚಿಗೆ ಚೆಸ್ ತರಬೇತಿ ಪಡೆದು, ಹಲವು ಸ್ಪರ್ಧೆಯಲ್ಲಿ ಭಾಗವಹಿಸಿರುವುದೂ ಕೂಡಾ ವಿಶೇಷ.
ಇಂಗ್ಲೀಷ್ ಮಾಧ್ಯಮ ದಲ್ಲಿ ಕಲಿಯುತ್ತಿದ್ದರೂ ಕನ್ನಡಭಾಷೆ ಬಗ್ಗೆ ಅತೀವ ಪ್ರೀತಿ. ಬಹುಮುಖ ಪ್ರತಿಭೆಯ ಚಿರಂಜೀವಿ ಆರ್ಯನ್ ರಂಜನ್ ಗೌಡ ಅವರಿಗೆ ಅಭಿನಯ ಕ್ಷೇತ್ರದಲ್ಲಿನ ಪ್ರತಿಭೆಯನ್ನು ಗುರುತಿಸಿ ಕಲಾಭೂಮಿ
ಪ್ರತಿಷ್ಠಾನವು ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಯನ್ನು ನೀಡಿ ಗೌರವಿಸುತ್ತಿದೆ.

ಈ ಪ್ರಶಸ್ತಿಯನ್ನು ಇದೇ ನ. 29 ರಂದು ಬೆಂಗಳೂರಿನ ಕಲಾಗ್ರಾಮ ಸಂಸ್ಕೃತಿಕ ಸಮುಚ್ಛಯದಲ್ಲಿ ಪ್ರದಾನ ಮಾಡಲಾಗುವುದು ಎಂದು ಕಲಾಭೂಮಿ
ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆಸ್ಕರ್ ಕೃಷ್ಣ ತಿಳಿಸಿದ್ದಾರೆ.