ಡಾ. ವಿಷ್ಣುವರ್ಧನ್ ಅವರ ಪುತ್ಥಳಿ ಸ್ಥಾಪನೆಗೆ ನಾಳೆ ಭೂಮಿ ಪೂಜೆ

Spread the love

ಕೊಳ್ಳೇಗಾಲ: ಡಾ. ವಿಷ್ಣು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ.

ಡಾ. ವಿಷ್ಣುವರ್ಧನ್ ಅವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಫೆ.21 ರಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಕೆ.ಆರ್. ಬಾಲರಾಜು ನಾಯಕ್ ಅವರು ತಿಳಿಸಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದ ಬಳಿ ವಿಜಯಲಕ್ಷ್ಮಿ ಲಾಡ್ಜ್ ಮುಂಭಾಗ ಸುಮಾರು 35 ಲಕ್ಷ ರೂ.ಗಳ ವೆಚ್ಚದಲ್ಲಿ ವುಷ್ಣು ಪುತ್ಥಳು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ವಿಷ್ಣುವರ್ಧನ್ ಅವರ ಸಾಹಸಸಿಂಹ ಚಿತ್ರದ ಶೈಲಿಯ 10 ಅಡಿ ಎತ್ತರದ 600 ಕೆಜಿ ತೂಕದ ಕಂಚಿನ ಪ್ರತಿಮೆ ತಯಾರಿಸಲು ಬೆಂಗಳೂರಿನ ಆಕಾರ್ ಸಂಸ್ಥೆಗೆ ನೀಡಿದ್ದು ಪ್ರತಿಮೆ ಸ್ಥಾಪನೆಗೆ ಮಂಟಪ ಹಾಗೂ ಪಾರ್ಕಿಂಗ್ ನಿರ್ಮಾಣ ಕಾರ್ಯಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ರೇಖಾ ರಮೇಶ್, ಪೌರಾಯುಕ್ತ ರಮೇಶ್, ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಎಸ್.ಬಾಲರಾಜು, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಖ್ಯಾತ ಬೆನ್ನು ಹುರಿ ಮೂಳೆ ತಜ್ಞರಾದ ಡಾ. ಎನ್.ಎಸ್. ಮೋಹನ್ ನಗರಸಭಾ ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಹಾಗೂ ನಗರಸಭೆಯ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಮುಖಂಡರು, ವಿಷ್ಣುವರ್ಧನ್ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ಡಾ. ವಿಷ್ಣು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಾಲರಾಜು ನಾಯಕ ಅವರು ತಿಳಿಸಿದ್ದಾರೆ.