ಆಡುಮುಟ್ಟದ ಸೊಪ್ಪಿಲ್ಲ ಡಾ. ರಾಜಕುಮಾರ್ ಮಾಡದ ಪಾತ್ರವಿಲ್ಲಕನ್ನಡದ ಅಸ್ಮಿತೆ ರಾಜಣ್ಣ: ಅಯೂಬ್ ಖಾನ್

Spread the love

ಮೈಸೂರು: ಆಡುಮುಟ್ಟದ ಸೊಪ್ಪಿಲ್ಲ ಡಾ. ರಾಜಕುಮಾರ್ ಅವರು ಮಾಡದ ಪಾತ್ರವಿಲ್ಲ
ಕನ್ನಡದ ಅಸ್ಮಿತೆ ರಾಜಣ್ಣ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಬಣ್ಣಿಸಿದರು‌

ಕನ್ನಡಚಿತ್ರರಂಗದ ನಟಸಾರ್ವಭೌಮ ವರನಟ ಡಾ. ರಾಜಕುಮಾರ್ ಅವರ 96ನೇ ಜಯಂತಿಯನ್ನ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಆಚರಿಸಿದ ವೇಳೆ
ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಅವರ ಪ್ರತಿಮೆಗೆ ಅಯೂಬ್ ಖಾನ್ ಅವರು ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಗಡಿನಾಡಿನ ಚಾಮರಾಜನಗರ ಗಾಜನೂರಿನ ಗ್ರಾಮಂತರ ಪ್ರದೇಶದಲ್ಲಿ ಕಲಾವಿದರ ಕುಟುಂಬದಿಂದ ಬಂದ ರಾಜಕುಮಾರ್ ಅವರಿಗೆ ಕಲೆ, ನಟನೆ ಕನ್ನಡ ಭಾಷೆಯ ಅಭಿಮಾನ ಶ್ರದ್ಧೆ, ಆಸಕ್ತಿ, ಅಚಲವಾದ ಗುರಿ ಸಾಧಿಸುವ ಚಲವಿತ್ತು ಎಂದು ಸ್ಮರಿಸಿದರು‌

ನಾಟಕ, ಪೌರಾಣಿಕ, ಸಮಾಜಿಕ ಚಿತ್ರದವರೆಗೂ ನಟಿಸಿ ಇಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನ ಡಾ.ರಾಜ್ ಸಾರಿದ್ದಾರೆ, ಆಡು ಮುಟ್ಟದ ಸೊಪ್ಪಿಲ್ಲ, ರಾಜಕುಮಾರ್ ಮಾಡದ ಪಾತ್ರವಿಲ್ಲ, ಸೈನಿಕ, ರೈತ, ವೈದ್ಯ, ಪ್ರಾಧ್ಯಾಪಕ, ಅಧಿಕಾರಿ, ಕಾರ್ಮಿಕ, ಆರಕ್ಷಕ, ಅರಸ ಹೀಗೆ ನೂರಾರು ಪಾತ್ರಗಳನ್ನ ನಿರ್ವಹಿಸಿದ್ದಾರೆ ಕೊಂಡಾಡಿದರು.

ಕನ್ನಡ ನಾಡು, ನುಡಿ, ಜಲ ವಿಚಾರಕ್ಕೆ ಧಕ್ಕೆ ಬಂದಾಗ ನ್ಯಾಯಕ್ಕಾಗಿ ಹೋರಾಟದ ಧ್ವನಿ ಎತ್ತುತ್ತಿದ್ದವರು ಕನ್ನಡದ ಅಸ್ಮಿತೆ ಡಾ. ರಾಜಣ್ಣ ಎಂದು ಅಯೂಬ್ ಖಾನ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಡಾ. ರಾಜಕುಮಾರ್ ಅವರಿಗೂ ಅವಿನಾಭಾವ ಭಾಂದವ್ಯವಿತ್ತು,ಭೇಟಿ ಮಾಡಿದಾಗಲೆಲ್ಲ ನಮ್ ಕಾಡ್ನವರು ಅಂತಿದ್ದರು ಅದಕ್ಕಾಗಿಯೇ ಚಾಮರಾಜನಗರ ಸುತ್ತಮುತ್ತಲು ಶಾಶ್ವತ ಅಭಿವೃದ್ಧಿ ಕಾರ್ಯಕ್ಕಾಗಿ ರಾಜಣ್ಣ ಅವರ ಹಟ್ಟುಹಬ್ಬದಂದೇ ವಿಶೇಷವಾಗಿ ಮಹದೇಶ್ವರ ಬೆಟ್ಟದಲ್ಲಿ ಮಂತ್ರಿಮಂಡಲ ಸಂಪುಟ ಸಭೆ ಆಯೋಜಿಸಿದ್ದಾರೆ ಎಂದು ಶ್ಲಾಘಿಸಿದರು ‌

ನನಗೂ ಸಹ ಮೈಸೂರಿನ ಮೇಯರ್ ಆಗಲು ಡಾ. ರಾಜಕುಮಾರ್ ಅವರು ಅಭಿನಯಿಸಿರುವ ಮೇಯರ್ ಮುತ್ತಣ್ಣ ಚಿತ್ರ ಪ್ರೇರೇಪಿಸಿತು ಎಂದು ಖಾನ್ ಈ ವೇಳೆ ನೆನಪು ಮಾಡಿಕೊಂಡರು.

ಮುಂದಿನ ದಿನದಲ್ಲಿ ಬೇಸಿಗೆ ವಸ್ತುಪ್ರದರ್ಶನದಲ್ಲಿ ಡಾ. ರಾಜಣ್ಣ ಅವರ ಅಭಿನಯದ ಚಿತ್ರಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಯೂಬ್ ಖಾನ್ ಪ್ರಕಟಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸಿಇಒ ಕೆ.ರುದ್ರೇಶ್, ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಲ್ಲಿಕ್, ಕೃಷ್ಣರಾಜೇಂದ್ರ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ, ಕೆಪಿಸಿಸಿ‌ ಸದಸ್ಯ ರಾಕೇಶ್,ಒಂಟಿಕೊಪ್ಪಲು ಗುರುರಾಜ್, ಆಪ್ತಸಹಾಯಕ ನಾಗೇಶ್, ಪಾಂಡು, ಪ್ರಾಧಿಕಾರದ ಸಿಬ್ಬಂದಿ ವರ್ಗ ಹಾಜರಿದ್ದರು.