ಅಂಬೇಡ್ಕರ್‌ ನಡೆದಾಡುವ ಗ್ರಂಥಾಲಯ:ವೆಂಕಟರಮಣ ಜಿ ವಿ‌

ಮೈಸೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ವಿಶ್ವ ಜ್ಞಾನಿಯಾಗಿದ್ದು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳಿತು
ಎಂದು ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ
ಮೌಲ್ಯಮಾಪನ ಕುಲಸಚಿವ ವೆಂಕಟರಮಣ ಜಿ ವಿ‌ ತಿಳಿಸಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇಂದು ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 68 ನೆ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಲೊಂಬೋ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್‌ ಅವರ ದೀರ್ಘ ಅಧ್ಯಯನದ ಉದಾಹರಣೆಯನ್ನು ನೆನೆಪು ಮಾಡಿ, ಅಂಬೇಡ್ಕರ್‌ ರವರು ನಡೆದಾಡುವ ಗ್ರಂಥಾಲಯವಾಗಿದ್ದರು ಎಂದು ಹೇಳಿದರು.

ದಲಿತರು, ಅಲ್ಪಸಂಖ್ಯಾತರು, ಅಸಮಾನತೆಯ ವಿರುದ್ದ ದಿಟ್ಟತನದಿಂದ ಹೋರಾಟ ನಡೆಸಿದವರು.ಅವರ ಈ ಪರಿಶ್ರಮದ ಸಂವಿಧಾನದ ರಚನೆಯಿಂದ ಇಂದು ದೇಶಾದ್ಯಂತ ಜನರು ನೆಮ್ಮದಿಯಿಂದ ನಿಟುಸಿರು ಬಿಡುತಿದ್ದಾರೆ ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ ಎಂದು ವೆಂಕಟರಮಣ
ತಿಳಿಸಿದರು.

ತಾಂತ್ರಿಕ ಸಲಹೆಗಾಗರಾದ ಆರ್‌ ಸಿ ಕೆಂಪರಾಜು ರವರು ಅಂಬೇಡ್ಕರ್‌ ರವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿದರು.