ಗೃಹಿಣಿ ಆತ್ಮಹತ್ಯೆ ಕೇಸ್:ಪತಿಗೆ10 ವರ್ಷ ಕಠಿಣ ಶಿಕ್ಷೆ

ಮೈಸೂರು,ಆ.1: ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಪ್ರಕರಣ ಸಂಬಂಧ ಪತಿ ಮತ್ತು ಮನೆಯವರಿಗೆ ನ್ಯಾಯಾಲಾಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೈಸೂರಿನ ಶಾರದಾದೇವಿ ನಗರ ವಾಸಿ
1ನೇ ಆರೋಪಿ ಗೌತಮ್ ಮತ್ತು ಆತನ ತಾಯಿ,ತಂಗಿಗೆ ಗೆ ಶಿಕ್ಷೆ ವಿಧಿಸಲಾಗಿದೆ.

ಗೌತಮ್ ರಾಜೇಂದ್ರ ನಗರದ ವಾಸಿ ಸುಕನ್ಯಾ ಬಾಯಿ ಮತ್ತು ವಿಶ್ವೇಶ್ವರ ರಾವ್ ಮಗಳು ಮಹಾಲಕ್ಷ್ಮೀ ಎಂಬುವರನ್ನು 18-10-2011 19-10-2011 ರಲ್ಲಿ ಮದುವೆಯಾಗಿದ್ದ.

ಆಗ ಆರೋಪಿಗಳು ವರದಕ್ಷಿಣೆಯಾಗಿ ಮೃತಳ ತವರು ಮನೆಯಿಂದ 10 ಸಾವಿರ ನಗದು 12 ಗ್ರಾಂ ತೂಕದ ಚಿನ್ನದ ಸರ ಮತ್ತು ಅರ್ಧ ಕೆ.ಜಿ ತೂಕದ ಬೆಳ್ಳಿ ದೀಪಗಳು ಮತ್ತು ಇತರೆ ಬೆಳ್ಳಿ ಪದಾರ್ಥಗಳನ್ನು ವರದಕ್ಷಿಣೆಯಾಗಿ ತೆಗೆದುಕೊಂಡಿದ್ದರು.

ಮದುವೆ ನಂತರ ಆರೋಪಿಗಳು ಸಣ್ಣ ಪುಟ್ಟ ವಿಚಾರಕ್ಕೆ ಹಾಗೂ ಹೆಚ್ಚಿನ ವರದಕ್ಷಿಣೆಗಾಗಿ ಮೃತಳಿಗೆ ಕಿರುಕುಳ ಕೊಟ್ಟಿದ್ದರು.

ಜತೆಗೆ ಆಕೆಯ ಅಜ್ಜ ಅಜ್ಜಿ ಬರೆದುಕೊಟ್ಟಿದ್ದ ಮನೆ ನಂ: 8ರ ಕೆಳ ಅಂತಸ್ತನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಆರೋಪಿಗಳು ಮೃತಳಿಗೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ್ದರು

ಇದರಿಂದಾಗಿ ಮಹಾಲಕ್ಷ್ಮೀ 17-08-2013 ರಂದು ಸಂಜೆ 8.30ರಲ್ಲಿ ಹಿಂದೆ ವಾಸವಿದ್ದ ಶಾರದದೇವಿ ನಗರದ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ವೇಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಸರಸ್ವತಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೃತಳ ಗಂಡ ಗೌತಮ್, ಅತ್ತೆ ಕುಶಾಲಕುಮಾರಿ, ನಾದಿನಿ ಸ್ವಪ್ನ ಅವರುಗಳ ವಿರುದ್ಧ ಅಂದಿನ ತನಿಖಾಧಿಕಾರಿ ಬಿ.ಟಿ.ಕವಿತ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯು ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು, ಅಪರಾಧ ಸಾಬೀತಾದ ಹಿನ್ನಲೆಯಲ್ಲಿ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ರೂಪ ಅವರು ಆರೋಪಿ‌ ಗೌತಮ್ ಗೆ 10‌ ವರ್ಷ ಕಠಿಣ ಶಿಕ್ಷೆ ಹಾಗೂ ಒಂದು ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಉಳಿದ ಆರೋಪಿಗಳಿಗೆ ಏಳು
ವರ್ಷ ಕಠಿಣ ಶಿಕ್ಷೆ ತಲಾ ರೂ.50,000 ರೂ ದಂಡ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಯೋಗೇಶ್ವರ ಬಿ ಅವರು ವಾದ ಮಂಡನೆ ಮಾಡಿಸಿದರು.