ವರ್ಗಾವಣೆಗೊಂಡ ಹುಣಸೂರು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಕೆಗೆ ಮನವಿ

Spread the love

ಹುಣಸೂರು: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಬಡ ಜನರಿಗಾಗಿ ನಿರ್ಮಿಸಿದ್ದ ಹುಣಸೂರು ಸಾರ್ವಜನಿಕ ಆಸ್ಪತ್ರೆ ಬಡಜನರಿಗೆ ಅನುಕೂಲವಾಗಿದೆ.

ಈ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರು, ನರ್ಸ್ ಗಳು ಸೇರಿದಂತೆ ಎಲ್ಲಾ ಸೌಲಭ್ಯಗಳು ಉತ್ತಮವಾಗಿವೆ.

ಆದರೆ ಇತ್ತೀಚೆಗೆ ಇಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ಕ್ಯಾನಿಂಗ್ ಡಾ. ವೆಂಕಟರಮಣ, ನೇತ್ರ ವೈದ್ಯರಾದ ಡಾ. ಲತಾ ಮತ್ತು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ಟಾಫ್ ನರ್ಸ್ ಅವರುಗಳನ್ನು ದಿಢೀರನೆ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ.

ಹುಣಸೂರಿನ ಈ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಇನ್ನೂ ಹಲವು ವೈದ್ಯರು ಇದ್ದಾರೆ, ಆದರೆ ಅವರನ್ನು ಇನ್ನು ವರ್ಗಾವಣೆ ಮಾಡದೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ವೆಂಕಟರಮಣ ಡಾ. ಲತಾ ಮತ್ತು ಸ್ಟಾಫ್ ನರ್ಸ್ ಅವರುಗಳನ್ನು
ವರ್ಗಾವಣೆ ಮಾಡಲಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ವರ್ಷಿಣಿ ನ್ಯೂಸ್ ಪೋರ್ಟಲ್ ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮಾತನಾಡಿದ್ದು, ಡಾಕ್ಟರ್ ವೆಂಕಟರಮಣ, ಡಾಕ್ಟರ್ ಲತಾ ಅವರು ಯಾರೇ ಬಡ ಜನರು ಬಂದರು ಅವರಿಗೆ ಸ್ಪಂದಿಸಿ ಅವರಿಗೆ ಉತ್ತಮವಾಗಿ ಪರೀಕ್ಷಿಸಿ ವೈದ್ಯೋಪಚಾರ ಮಾಡುತ್ತಿದ್ದರು. ಇದೀಗ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿರುವುದರಿಂದ ಹಣಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಬಹಳ ಬೇಸರವಾಗಿದೆ ಸರ್ಕಾರ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಡಾಕ್ಟರ್ ವೆಂಕಟರಮಣ ಮತ್ತು ಡಾಕ್ಟರ್ ಲತಾ ಅವರನ್ನು ಇದೇ ಆಸ್ಪತ್ರೆಯಲ್ಲಿ ಮುಂದುವರಿಸಬೇಕೆಂದು ಚೆಲುವುರಾಜು ಮನವಿ ಮಾಡಿದ್ದಾರೆ.