ಮೈಸೂರು: ಚಿಕಿತ್ಸೆ ನಂತರ ಸಾಕಿದ ನಾಯಿ ಮೃತಪಟ್ಟಿದ್ದಕ್ಕೆ ಆಕ್ರೋಶ ಗೊಂಡ ಮಾಲೀಕರು ಪಶುವೈದ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕೆ.ಆರ್.ವನಂ ಮಾನಂದವಾಡಿ ರಸ್ತೆಯಲ್ಲಿರುವ ವೆಟರ್ನರಿ ಆಸ್ಪತ್ರೆ ಮುಖ್ಯ ವೈಧ್ಯಾಧಿಕಾರಿ ಡಾ.ಲಕ್ಷ್ಮೀಶ್ ಎಂಬುವರ ಮೇಲೆ ನಾಯಿ ಮಾಲೀಕರು ಹಲ್ಲೆ ಮಾಡಿದ್ದಾರೆ.
ಜಯನಗರ ನಿವಾಸಿ ಪ್ರದೀಪ್ ಹಾಗೂ ಅವರ ಪತ್ನಿ ಹಲ್ಲೆ ನಡೆಸಿದ್ದಾರೆಂದು ಡಾ.ಲಕ್ಷ್ಮೀಶ್ ದೂರು ನೀಡಿದ್ದಾರೆ.
ಪ್ರದೀಪ್ ಅವರ ಸಾಕಿದ ನಾಯಿ ಪಗ್ ಬೀಡ್ ಗೆ ಡಾ.ಲಕ್ಷ್ಮೀಶ್ ಚಿಕಿತ್ಸೆ ನೀಡಿದ್ದಾರೆ.ನಂತರ ಪ್ರದೀಪ್ ಅವರು ಖಾಸಗಿ ವೆಟರ್ನರಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಅವರ ನಾಯಿ ಮೃತಪಟ್ಟಿದೆ.
ಆದರೆ ಪ್ರದೀಪ್ ಮತ್ತು ಪತ್ನಿ ಆಸ್ಪತ್ರೆಗೆ ಬಂದು ಏನನ್ನೂ ಹೇಳದೆ ಡಾ.ಲಕ್ಷ್ಮೀಶ್ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೂಗಾಡಿದ್ದಾರೆ.
ನಂತರ ನಾಯಿ ಸಾವಿಗೆ ಕಾರಣ ತಿಳಿಯಲು ಖಾಸಗಿ ಆಸ್ಪತ್ರೆಗೆ ತೆರಳಿದ ಡಾ.ಲಕ್ಷ್ಮೀಶ್ ಅವರ ಮೇಲೆ ಪ್ರದೀಪ್ ಪತ್ನಿ ಹಲ್ಲೆ ಮಾಡಲು ಯತ್ನಿಸಿದ್ದಾರೆ.ಹಲ್ಲೆ ನಡೆಸಿದ ದಂಪತಿ ವಿರುದ್ದ ಕ್ರಮ ಕೈಗೊಳ್ಳುವಂತೆ ಡಾ.ಲಕ್ಷ್ಮೀಶ್ ಅಶೋಕಾಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.