ಬೆಂಗಳೂರು: ದೊಡ್ಮನೆ ಸೊಸೆ ಚಿತ್ರದ ಮುಹೂರ್ತದ ಕ್ಷಣಗಳಿಗೆ ಕಾರಣಕರ್ತರಾದ ಹಾಗೂ ಸಾಕ್ಷಿಗಳಾದ ಎಲ್ಲಾ ಸುಂದರ ಮನಸುಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ನಟ, ನಿರ್ದೇಶಕ, ನಿರ್ಮಾಪಕ ಆಸ್ಕರ್ ಕೃಷ್ಣ ಹೃದಯ ತುಂಬಿ ನುಡಿದಿದ್ದಾರೆ.
ನೂರಾರು ಜನ ಸೇರಿದ್ದ ಈ ಸಮಾರಂಭಕ್ಕೆ ಆಗಮಿಸಿ ಚಿತ್ರದ ಮೊದಲ ಚಿತ್ರಿಕೆಗೆ ಕ್ಲಾಪ್ ನೀಡಿದ ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರಿಗೆ ಹಾಗೂ ಮೊದಲ ಚಿತ್ರಿಕೆಗೆ ಕ್ಯಾಮೆರಾ ಸ್ವಿಚ್ ಆನ್ ಮಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಚಿತ್ರದಲ್ಲಿ ದೊಡ್ಮನೆಯ ಯಜಮಾನನ ಪಾತ್ರಧಾರಿಯಾಗಿ ನೇತೃತ್ವವಹಿಸಿರುವ ಹಿರಿಯ ನಟರಾದ ಸುಂದರ್ ರಾಜ್ ಅವರಿಗೆ ವಂದನೆ ಸಲ್ಲಿಸಿದರು.
ನಿರ್ಮಾಪಕರಾದ ಡಾ.ಸುನಿಲ್ ಕುಮಾರ್, ಮುಹೂರ್ತದ ಕೆಲಸಗಳಿಗಾಗಿ ಅಹೋರಾತ್ರಿ ಕೆಲಸ ಮಾಡಿ ಸುಂದರ ಸಮಾರಂಭವನ್ನು ಸೃಷ್ಟಿ ಮಾಡಿಕೊಟ್ಟ ಗೆಳೆಯ ಪ್ರಶಾಂತ್ ಅಂಕಪುರ, ಚಿತ್ರದ ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ದೂರದೂರುಗಳಿಂದ ಆಗಮಿಸಿ ಸಮಾರಂಭದ ಸೌಂದರ್ಯವನ್ನು ಹೆಚ್ಚಿಸಿದ ಸ್ನೇಹಿತರಿಗೆ, ಬಂಧುಗಳಿಗೆ, ನನ್ನ ಒಳಿತಿಗಾಗಿ ಪ್ರಾಮಾಣಿಕವಾಗಿ ಹಾರೈಸಿದ ಎಲ್ಲಾ ಗೆಳೆಯ, ಗೆಳತಿಯರಿಗೆ, ಹಿರಿಯರಿಗೆ ಸಾವಿರ ವಂದನೆಗಳು ಎಂದು ಆಸ್ಕರ್ ಕೃಷ್ಣ ತಿಳಿಸಿದರು.
ದೊಡ್ಮನೆ ಸೊಸೆ ಚಿತ್ರದ
ಚಿತ್ರೀಕರಣ ಫೆಬ್ರವರಿ 18ರಿಂದ ಪ್ರಾರಂಭವಾಗಲಿದೆ
ನಿಮ್ಮೆಲ್ಲರ ಹಾರೈಕೆ ಮತ್ತು ಸಹಕಾರ ನಿರಂತರವಾಗಿರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.