ಡಿ.7 ರಂದು ಸಾಹಸಸಿಂಹ ನೆನಪಿನಲ್ಲಿ ವಿಷ್ಣು ಸಂಭ್ರಮ- ಚಿತ್ರಗೀತೆಗಳ ಕಾರ್ಯಕ್ರಮ

ಮೈಸೂರು: ಕನ್ನಡಚಿತ್ರರಂಗದ ಸಾಹಸಸಿಂಹ ವಿಷ್ಣುವರ್ಧನ್ ನೆನಪಿನಲ್ಲಿ ‘ವಿಷ್ಣು ಸಂಭ್ರಮ’ ಮಧುರ ಸಾಹಿತ್ಯದ ರಸದೌತಣ ಗೀತೆಗಳ ಗಾಯನ ಕಾರ್ಯಕ್ರಮವನ್ನ ಗಾನ ಸಂಗಮ ಕಲಾತಂಡದ ವತಿಯಿಂದ ಡಿ. 7ರಂದು ಭಾನುವಾರ ಬೆಳಗ್ಗೆ 9ರಿಂದ ಸಂಜೆ 6ರವರಗೆ ಉದ್ಬೂರು ಗೇಟ್ ಬಳಿಯಿರುವ ವಿಷ್ಣು ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.

ವಿಷ್ಣು ಸಂಭ್ರಮ ಕಾರ್ಯಕ್ರಮದ ಮಾಹಿತಿ ಪೋಸ್ಟರ್ ಅನ್ನು ರಂಗಭೂಮಿ ಕಲಾವಿದ ಮೆಲ್ಲಹಳ್ಳಿ ರಾಜೇಶ್ ಸಿ ಗೌಡ ಅವರು ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ಬಿಡುಗಡೆ ಮಾಡಿದರು.

ವಿಷ್ಣು ಸಂಭ್ರಮ ಆಯೋಜಕರು ಕಲಾವಿದರುಗಳಾದ ಮಲ್ಲಿಕಾರ್ಜುನ್ ಮತ್ತು ಅನಿತಾ ನೇತೃತ್ವದಲ್ಲಿ ಪ್ರಕಾಶ್, ಮೋಹನ್ ಕುಮಾರ್, ಕೃಷ್ಣ, ಅಶೋಕ್ ಕುಮಾರ್, ಸಿದ್ದಪ್ಪಾಜಿ ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ಸಾಹಾಸಿಂಹ ವಿಷಗಣು ಗೀತೆಗಳನ್ನ ಹಾಡಲಿದ್ದಾರೆ.

ಈ ವೇಳೆ ಮೆಲ್ಲಹಳ್ಳಿ ರಾಜೇಶ್ ಸಿ ಗೌಡ ಅವರು ಮಾತನಾಡಿ, ಮೈಸೂರಿನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಷ್ಣುಸಂಭ್ರಮದ ಮೂಲಕ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ವಿಷ್ಣು ಸಂಭ್ರಮ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಅವರು ಉದ್ಘಾಟಿಸಲಿದ್ದು, ಮೆಲ್ಲಹಳ್ಳಿ ರಾಜೇಶ್ ಸಿ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜನಾರ್ಧನ್, ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕೆ.ವಿ ಮಲ್ಲೇಶ್, ಮಾರ್ಕೆಟ್ ಶ್ರೀನಿವಾಸ್, ಕರವೇ ಅಧ್ಯಕ್ಷ ಲಿಂಗರಾಜು, ಪ್ರಕಾಶ್, ನಿರೂಪಕ ಅಜಯ್ ಶಾಸ್ತ್ರಿ, ಒಕ್ಕಲಿಗರ ಸಂಘದ ನಿರ್ದೇಶಕ ಗುರುರಾಜ್, ರಂಗಸ್ವಾಮಿ ಪಾಪು, ಮಹೇಂದ್ರ ಕಾಗಿನೆಲೆ, ಪ್ರದೀಪ್, ರಾಕೇಶ್ ಕುಮಾರ್, ಜಯಲಕ್ಷ್ಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಷ್ಣು ಸಂಭ್ರಮ ಪೋಸ್ಟರ್ ಬಿಡುಗಡೆ ವೇಳೆ ಮೆಲ್ಲಹಳ್ಳಿ ರಾಜೇಶ್ ಸಿ ಗೌಡ, ಅಯೋಜಕರಾದ ಮಲ್ಲಿಕಾರ್ಜುನ್ ಮತ್ತು ಅನಿತಾ, ಪ್ರಕಾಶ್, ಶಿವಲಿಂಗಯ್ಯ, ನಿರೂಪಕ ಅಜಯ್ ಶಾಸ್ತ್ರಿ, ಅಶೋಕ್ ಕೃಷ್ಣ, ಮೋಹನ್ ಮತ್ತಿತರರು ಹಾಜರಿದ್ದರು.