ಬ್ರಾಹ್ಮಣರ ಕುರಿತು ಆಕ್ಷೇಪಾರ್ಹ ಮಾತು:ಅನುರಾಗ್ ಕಶ್ಯಪ್‌ ವಿರುದ್ಧ ಪ್ರಕರಣ ದಾಖಲು

Spread the love

ಇಂದೋರ್ (ಮಧ್ಯಪ್ರದೇಶ): ಬ್ರಾಹ್ಮಣರ ಕುರಿತು ಆಕ್ಷೇಪಾರ್ಹ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕಶ್ಯಪ್ ವಿರುದ್ಧ ಇಂದೋರ್‌ನ ಪಲಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಿಧ ಬ್ರಾಹ್ಮಣ ಸಂಘಟನೆಗಳು ಕಶ್ಯಪ್ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.

ನಿರ್ದೇಶಕ ಅನುರಾಗ್​ ಕಶ್ಯಪ್​ ಅವರು ಸಾಮಾಜಿಕ ಮಾಧ್ಯಮದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಮಾನಿಸುವ ಪೋಸ್ಟ್​ ಹಂಚಿಕೊಂಡಿರುವ ಆರೋಪವಿದೆ. ತಮ್ಮ ಸಿನಿಮಾಗೆ ಸಂಬಂಧಿಸಿದಂತೆ ಸಮುದಾಯವು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಅವರು ಸಮುದಾಯವನ್ನು ಟೀಕಿಸಿದ್ದರು ಎಂದು ವರದಿಯಾಗಿತ್ತು.
ಇದು ವಿವಾದಕ್ಕೆ ಕಾರಣವಾಗಿತ್ತು.

ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತ ನೀರಜ್ ಯಾಗ್ನಿಕ್ ಎಂಬವರು ದೂರು ನೀಡಿದ್ದಾರೆ. ನಿರ್ದೇಶಕರು ಬ್ರಾಹ್ಮಣರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.