ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘಕ್ಕೆ ದಿನೇಶ್ ಗುಂಡೂರಾವ್ ಭೇಟಿ

ಮೈಸೂರು,ಸೆಪ್ಟೆಂಬರ್.1: ಮೈಸೂರಿನ ಕೆ ಆರ್ ಮೊಹಲ್ಲಾ ದಲ್ಲಿರುವ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ನವೀಕೃತ ಕಟ್ಟಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ
ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿದರು.

ಸಂಘದ ಪದಾಧಿಕಾರಿಗಳು ದಿನೇಶ್ ಗುಂಡೂರಾವ್ ಅವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಮಾತನಾಡಿದ ಸಚಿವರು,
ನವೀಕೃತ ಕಟ್ಟಡಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಮ್ಮ ತಂದೆಯವರಾದ ಆರ್. ಗುಂಡೂರಾಯರ ಅಚ್ಚುಮೆಚ್ಚಿನ ಪ್ರೀತಿಪಾತ್ರವಾದ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘ, ಮೈಸೂರಿನಲ್ಲಿ 1924ರಲ್ಲೆ ನಿರ್ಮಾಣ ಮಾಡಿದ್ದ ವಿದ್ಯಾರ್ಥಿ ನಿಲಯವು ಶತಮಾನೋತ್ಸವ ಕಂಡಿದೆ, ನಮ್ಮ ತಂದೆಯವರು ಸಹ ಭೇಟಿ ನೀಡುತ್ತಿದ್ದರು ಎಂದು ಸ್ಮರಿಸಿದರು.

ನಾನು ಸಹ ತಂದೆ ತಾಯಿಯಿಂದ ರೂಡಿಸಿಕೊಂಡ ಸೇವಾಮನೋಭಾವದ ದೃಷ್ಟಿಯಿಂದ ಸದಾಕಾಲಕ್ಕೂ ಸಂಘದ ಚಟುವಟಿಕೆಗಾಗಿ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಮೈಸೂರಿನಲ್ಲಿ ನಮ್ಮ ವಿಪ್ರ ಸಮಾಜದ ನಾಯಕರಾಗಿರುವ ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಅವರು ಸಹ ವಿಪ್ರ ಸಮುದಾಯದ ಹಲಾವರು ಸಂಘ ಸಂಸ್ಥೆಗಳಿಗೆ ಸಹಕಾರವನ್ನ ಕೊಟ್ಟಿದ್ದಾರೆ ಅದರಂತೆಯೇ ಸಂಘದ ನವೀಕೃತ ಕಟ್ಟಡದ ಲೋಕಾರ್ಪಣೆ ನೇತೃತ್ವ ವಹಿಸಬೇಕೆಂದು ತಿಳಿಸಿದರು,

ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಹೆಚ್.ವಿ ರಾಜೀವ್ ಅವರು ಮಾತನಾಡಿ ನಮ್ಮ ಸಮಾಜದ ಧೀಮಂತ ನಾಯಕರು ಕರ್ನಾಟಕ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನ ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಗುಂಡೂರಾಯರು ಹಲವಾರು ವಿಪ್ರ ನಾಯಕರನ್ನ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಲು ಬೆನ್ನುಲುಬಾಗಿ ನಿಂತು ಪ್ರೇರಣೆಯಾದರು ಎಂದು ತಿಳಿಸಿದರು.

ಅವರಂತೆ ಅವರ ಸುಪುತ್ರರು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರೂ ಸಹ ಸಮುದಾಯದ ಯಾವುದೇ ಸಮಸ್ಯೆಗಳಿದ್ದರೂ ಸ್ಪಂದಿಸುವ ನಾಯಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಾಹಾಸಭಾ ಸಂಘಟನಾತ್ಮಕವಾಗಿ ರಾಜ್ಯದಲ್ಲಿ ಬಲಿಷ್ಠವಾಗಲು ಗುಂಡೂರಾಯರ ಕುಟುಂಬ ಪ್ರಮುಖವಾದುದು, ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ನವೀಕೃತ ಕಟ್ಟಡಕ್ಕೆ ಗುಂಡೂರಾಯರು ಮತ್ತು ವರಲಕ್ಷ್ಮಿ ಗುಂಡೂರಾಯರ ಹೆಸರನ್ನ ನಾಮಕರಣ ಮಾಡಲು ಮುಂದಾಗಿರುವ ಸಂಘದ ಪದಾಧಿಕಾರಿಗಳ ಕಾರ್ಯ ಸ್ವಾಗತಾರ್ಹ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್, ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಜಿ ಎಸ್ ಎಲ್ ನಾಗರಾಜ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ, ವಿನಯ್ ಕಣಗಾಲ್ ಸೇರಿದಂತೆ ‌ಅನೇಕ ಪದಾಧಿಕಾರಿಗಳು, ಹಿರಿಯರು ಹಾಜರಿದ್ದರು.