ಯಶಸ್ವಿಯಾಗಿ ನೆರವೇರಿದಡಿಜಿಟಲ್ ಮೀಡಿಯ ಕಾರ್ಯಗಾರ

Spread the love

ಮೈಸೂರು: ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಡಿಜಿಟಲ್ ಮೀಡಿಯಾ ಕಾರ್ಯಗಾರ ಮತ್ತು ಸಾಧಕ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ರಮಾಗೋವಿಂದು ರಂಗಮಂದಿರದಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಸಂಘಗಳಿಗೆ ಡಿಜಿಟಲ್ ಮೀಡಿಯಾ ಮಹತ್ವದ ಬಗ್ಗೆ ಗಣ್ಯರಿಂದ ಪ್ರಯುಕ್ತ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಯಿತು.

ಮೈಸೂರಿನ ಭಾರತ ಖೊ ಖೊ ವಿಶ್ವಕಪ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಕುಮಾರಿ ಚೈತ್ರ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಇದೇ ವೇಳೆ ಮೈಸೂರಿನ ವಿವಿಧ ಭಾಗಗಳಲ್ಲಿ ವಿವಿಧ ರಂಗಗಳಲ್ಲಿನ ಸಾಧಕರಿಗೂ ಪ್ರಶಸ್ತಿ ನೀಡಿ ಹುರಿದುಂಬಿಸಲಾಯಿತು.

ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷರಾದ ಸಿ ಬಸವರಾಜ್, ನಿರ್ದೇಶಕರಾದ ರಕ್ತದಾನಿ ಮಂಜು, ಮಂಜುನಾಥ್ ಮತ್ತು ಅನೀಫ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.