ಧರ್ಮಸ್ಥಳ ಪ್ರಕರಣ:ಎನ್ಐಎ ತನಿಖೆಗೆ ಶಾಸಕ ಗೋಪಾಲಯ್ಯ ಒತ್ತಾಯ

Spread the love

ಬೆಂಗಳೂರು,ಸೆ.1: ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಗೋಪಾಲಯ್ಯ ಅವರ ನೇತೃತ್ವದಲ್ಲಿ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳ ಚಲೋ
ಪ್ರಾರಂಭವಾಗಿದೆ.

ನಮ್ಮ ನಡಿಗೆ-ಧರ್ಮದೆಡೆಗೆ ಘೋಷ ವಾಕ್ಯ ದಡಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸೆಪ್ಟೆಂಬರ್ 1 ಸೋಮವಾರ ಬೆಳಿಗ್ಗೆ ಕ್ಷೇತ್ರದ ರಾಣಿ ಅಬ್ಬಕ್ಕ ಆಟದ ಮೈದಾನದಿಂದ (ಕಮಲಮ್ಮನ ಗುಂಡಿ) ಸಾವಿರಾರು ಕಾರ್ಯಕರ್ತರೊಂದಿಗೆ ನೂರಾರು ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಪಾಲಯ್ಯ ಅವರು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ನಾವೆಲ್ಲ ಬಸ್ಗಳಲ್ಲಿ ಧರ್ಮಸ್ಥಳಕ್ಕೆ ಹೋಗಬೇಕೆಂದುಕೊಂಡಿದ್ದೆವು ಆದರೆ ಬಸ್ ತಡೆಯುವ ಸಾಧ್ಯತೆ ಇರುವುದರಿಂದ ಕಾರುಗಳು ಮತ್ತು ಟೆಂಪೊ ಟ್ರಾವೆಲ್ಸ್ ಮೂಲಕ ಹೊರಟಿದ್ದೇವೆ ಎಂದು ಹೇಳಿದರು.

ನಮ್ಮ ಧರ್ಮ ಉಳಿಯಬೇಕು,ಅದಕ್ಕಾಗಿ ಈ ಹೋರಾಟ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಕಳೆದ ಒಂದುವರೆ ತಿಂಗಳಿಂದ ಮಂಜುನಾಥೇಶ್ವರ ಮತ್ತು ಅಣ್ಣಪ್ಪ ಸ್ವಾಮಿಯ ಮೇಲೆ ಅಪಪ್ರಚಾರ ನಡೆಯುತ್ತಿದೆ ಇದು ಹೋಗಬೇಕು ಇದರ ಹಿಂದೆ ಯಾರಿದ್ದಾರೆ ಮತ್ತು ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದು ಜನತೆಗೆ ತಿಳಿಯಬೇಕು ಹಾಗಾಗಿ ಇದನ್ನು ಎನ್ ಐ ಎ ತನಿಖೆಗೆ ಒಪ್ಪಿಸಬೇಕು ಎಂದು ಗೋಪಾಲಯ್ಯ ಒತ್ತಾಯಿಸಿದರು.

ಎಸ್ಐಟಿಗಿಂತ ಎನ್ಐಎ ತನಿಖೆ ಆದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವಂತಹ ಪಿತೂರಿ ಹಾಗಾಗಿ ಎನ್ ಐ ಎ ತನಿಖೆ ಸೂಕ್ತ ಎಂದು ಗೋಪಾಲಯ್ಯ ತಿಳಿಸಿದರು.