ಕಾವೇರಿ ಕ್ರಿಯಾ ಸಮಿತಿಯಿಂದ ಧರ್ಮಸ್ಥಳ ಚಲೋ ಪ್ರಾರಂಭ

Spread the love

ಮೈಸೂರು: ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಸಮಿತಿಯ ಅಧ್ಯಕ್ಷರಾದ ಎಸ್ ಜಯಪ್ರಕಾಶ್ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಧರ್ಮಸ್ಥಳ ಚಲೋ ಪ್ರಾರಂಭವಾಯಿತು.

ಮೈಸೂರಿನ ಕನ್ನಡ ಹೋರಾಟಗಾರರು ಹಾಗೂ ಕಾವೇರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಹೊರಟ ಧರ್ಮಸ್ಥಳ ಚಲೋ ಗೆ ವಿಧಾನ ಪರಿಷತ್ ಸದಸ್ಯರಾದ ಸಿ. ಎನ್ ಮಂಜೇಗೌಡರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರು ಚಾಲನೆ ನೀಡಿದರು.

ಈ ವೇಳೆ ಎಸ್ ಜಯಪ್ರಕಾಶ್ ಅವರು ಮಾತನಾಡಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿ, ಪಿತೂರಿ ನಡೆಸುತ್ತಿರುವ ಹಾಗೂ ಕುಮ್ಮಕ್ಕು ನೀಡುತ್ತಿರುವವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಹಿಂದೂ ಧರ್ಮ ಮತ್ತು ದೇವಾಲಯಗಳ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಾವು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿ ಮಾಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ದರ್ಶನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಜಯಪ್ರಕಾಶ್ ತಿಳಿಸಿದರು.

ಈ ಧರ್ಮಸ್ಥಳ ಚಲೋ ಯಾತ್ರೆ ಯಲ್ಲಿ ಕಾವೇರಿ ಕ್ರಿಯಾ ಸಮಿತಿಯ ತೇಜೇಶ್ ಲೋಕೇಶ್ ಗೌಡ, ಗೋಲ್ಡನ್ ಸುರೇಶ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ , ಪ್ರಭುಶಂಕರ, ಅಶೋಕ್, ಭಾಗ್ಯಮ್ಮ, ನೇಹಾ, ಶಿವಲಿಂಗಯ್ಯ , ಕೃಷ್ಣಪ್ಪ, ಹನುಮಂತಯ್ಯ, ರಘು ಅರಸ್, ಕುಮಾರ್ ಗೌಡ, ಮಂಜುಳ, ಪುಷ್ಪಾವತಿ, ಶ್ರೀನಿವಾಸ, ಪರಿಸರ ಚಂದ್ರು, ಜ್ಯೋತಿ, ಆನಂದ್ ಗೌಡ, ರಘು ಆಚಾರ್, ರವೀಶ್, ಸಂಜಯ್, ನಂದಕುಮಾರ್, ನಾರಾಯಣ ಗೌಡ ಸೇರಿದಂತೆ ಬಹಳಷ್ಟು ಮಂದಿ ಪಾಲ್ಗೊಂಡಿದ್ದಾರೆ.