ಧಾರವಾಡ: ಧಾರವಾಡದ ಸಿದ್ದರಾಮೇಶ್ವರ ಬಿ ಎಡ್ ಕಾಲೇಜಿನಲ್ಲಿ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.
ಸಿದ್ದರಾಮೇಶ್ವರ ಶಿಕ್ಷಣ ಮಹಾ ವಿದ್ಯಾಲಯ, ಕನ್ನಡ ಜಾನಪದ ಪರಿಷತ್ ಧಾರಾವಾಡ, ಜಾನಪದ ಯುವ ಬ್ರಿಗೇಡ್ ಹಾವೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಕಾಲೇಜಿನ ಪ್ರಾಚಾರ್ಯರು ಡಾ ಗಿರಿಜಾ ಹಿರೇಮಠ್, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನ ಅಧಿಕಾರಿಗಳು ಡಾ ದಳಪತಿ, ಪ್ರೊ ಕೆ ಎಸ್ ಕೌಜಲಗಿ, ಕನ್ನಡ ಜಾನಪದ ಪರಿಷತ್ ಧಾರವಾಡ ಜಿಲ್ಲಾಧ್ಯಕ್ಷ ಈರಪ್ಪ ಎಮ್ಮಿ, ಜಾನಪದ ಯುವ ಬ್ರಿಗೇಡ್ ಧಾರವಾಡ ಸಂಚಾಲಕ ಮಹೇಶ್ ತಳವಾರ, ಹಾವೇರಿ ಸಂಚಾಲಕ ಶಿವಯೋಗಿ, ಬೆಳಗಾವಿ ಸಂಚಾಲಕ ತೋಷಿಪ್, ಸಿದ್ದರಾಮೇಶ್ವರ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳು ಪ್ರೊ ಸಂಗಮೇಶ್ ಕೋಟ್ಬಾಗಿ ಮತ್ತಿತರರು ಉಪಸ್ಥಿತರಿದ್ದರು.
