ಅಭಿವೃದ್ಧಿ ಕಾರ್ಯಗಳಿಗೆ ಶ್ರೀವತ್ಸ ಚಾಲನೆ

Spread the love

ಮೈಸೂರು: ಮೈಸೂರಿನ ವಾರ್ಡ್ ನಂ.57 ಮತ್ತು 43ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀವತ್ಸ ಗುದ್ದಲಿ ಪೂಜೆ ನೆರವೇರಿಸಿದರು.

ವಾರ್ಡ್ ನಂ.7 ರ ಆದಿಚುಂಚನಗಿರಿ ರಸ್ತೆ ಆಹಾ ಬೊಂಬಾಟ್ ಹೋಟೆಲ್ ಮುಂಭಾಗ ಚರಂಡಿ ನಿರ್ಮಾಣದ 15ಲಕ್ಷ 25 ಸಾವಿರ ರೂ. ಹಾಗೂ ಪ್ರಮತಿ ಶಾಲೆ ಪಶ್ಚಿಮ ರಸ್ತೆಯ ಡೆಕ್ ಸ್ಲ್ಯಾಬ್, ಪಾದಚಾರಿ ಮಾರ್ಗ ನಿರ್ಮಾಣದ 8ಲಕ್ಷದ 90 ಸಾವಿರ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ವಾರ್ಡ್ ನಂ.43ರ ಕೃಷ್ಣಮೂರ್ತಿ ಬಡಾವಣೆಯ ದಿಗಂತ ವೃತ್ತದ ಪಕ್ಕ 2ನೇ ಮತ್ತು3 ನೇ ಕ್ರಾಸ್ ಮುಖ್ಯ ರಸ್ತೆ ಅಭಿವೃದ್ಧಿ 45 ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಿದರು.

ಇದೇ ವೇಳೆ ಶ್ರೀವತ್ಸ ಅವರು ಸ್ಥಳೀಯರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳುಗೆ ಸೂಚಿಸಿ, ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಆದೇಶಿಸಿದರು.

ಈ ವೇಳೆ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಮೇಶ್, ಜಗದೀಶ್, ಶಂಕರ್, ರಾಜೇಶ್, ಹೇಮಂತ್, ನಾಗೇಂದ್ರ, ಗೋಪಾಲ್ ರಾಜೇ ಅರಸ್, ಮಧು,ಗೋಪಿ, ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ರಾಕೇಶ್ ಗೌಡ, ಬಿಜೆಪಿ ಮುಖಂಡ ಪ್ರದೀಪ್ ಕುಮಾರ್, ಕಿಶೋರ್, ಆದಿತ್ಯ ಮತ್ತಿತರರು ಹಾಜರಿದ್ದರು.