ಪುನೀತ್ ಜನ್ಮದಿನ ಸ್ಫೂರ್ತಿದಿನವಾಗಿ ಆಚರಿಸುತ್ತಿರುವುದು ಅರ್ಥಪೂರ್ಣ: ಹರೀಶ್ ಗೌಡ

ಮೈಸೂರು: ಪುನೀತ್ ರಾಜಕುಮಾರ್ ಜನ್ಮದಿನವನ್ನು ಸ್ಫೂರ್ತಿದಿನವಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾ ಗಿದೆ ಎಂದು ಶಾಸಕ ಹರೀಶ್ ಗೌಡ ಹೇಳಿದರು.

ದೇವರಾಜ ಅರಸು ರಸ್ತೆಯಲ್ಲಿ ಪುನೀತ್ ರಾಜಕುಮಾರ್ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ದೇವರಾಜ ಮೊಹಲ್ಲಾ ಯುವಕರ ಬಳಗದ ವತಿಯಿಂದ
ಸಾರ್ವಜನಿಕರಿಗೆ ಗೀ ರೈಸ್ ಹಾಗೂ ಚಿಕನ್ ಚಾಪ್ಸ್ ಕೊಡಮಾಡಲಾಗಿದ್ದು,ಶಾಸಕ ಹರೀಶ್ ಗೌಡ ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಹರೀಶ್ ಗೌಡ ಅವರು,
ಪುನೀತ್ ಸಾವಿಗೂ ಮೊದಲು ರಾಜ್ಯದ ಬಹಳಷ್ಟು ಜನತೆಗೆ ಅವರು ಮಾಡಿದ್ದ ಸಾಮಾಜಿಕ ಸೇವೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದರು. ಚಿತ್ರಗಳು ಹಾಗೂ ಸಾಮಾಜಿಕ ಸೇವೆ ಮೂಲಕ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದರು, ಪುನೀತ್ ಜನ್ಮದಿನವನ್ನು ‘ಸ್ಫೂರ್ತಿದಿನ’ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾ ಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಮಲ್ಲೇಶ್, ಮಾಜಿ ಮೂಡ ಸದಸ್ಯರಾದ ನವೀನ್ ಕುಮಾರ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ವೀರಭದ್ರಪ್ಪ, ನಿತಿನ್ ಗುರುರಾಜ್ ,ಪ್ರಮೋದ ರವಿಚಂದ್ರನ್, ಹರ್ಷ ನವೀನ್ ,ನಂಜುಂಡಿ, ಮಂಜುನಾಥ್, ರಾಜು, ರಾಹುಲ್, ಕುಮಾರ್ ಶ್ರೀನಿವಾಸ್ ಮುಂತಾದರು ಉಪಸ್ಥಿತರಿದ್ದರು