ಮೈಸೂರು: ಮೈಸೂರಿನ ಶ್ರೀ ಗೌರಿ ಸಂಗೀತ ಶಾಲಾ ವತಿಯಿಂದ 10ನೇ ವರ್ಷದ ಮಧ್ವ ಪುರಂದರೋತ್ಸವದ ಅಂಗವಾಗಿ ದೇವರ ನಾಮದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಪುರಂದರದಾಸರು ರಚಿಸಿರುವ ದೇವರ ನಾಮಗಳನ್ನೇ ಹಾಡಬೇಕು,ಹಾಡಲು 4 ನಿಮಿಷಗಳ ಕಾಲಾವಕಾಶವಿರುತ್ತದೆ,
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಪ್ರವೇಶ ಶುಲ್ಕ 200 ರೂ ನಿಗದಿಪಡಿಸಲಾಗಿದ್ದು,
28.01.2025ರ ಒಳಗೆ ಹೆಸರನ್ನು ನೊಂದಾಯಿಸಿ ಕೊಳ್ಳಬೇಕೆಂದು ರಮಾಮಣಿ ಗುರುಪ್ರಸಾದ್ ತಿಳಿಸಿದ್ದಾರೆ.
ಫೆಬ್ವರಿ 2 ರಂದು ಬೆಳಿಗ್ಗೆ 9.30 ರಿಂದ ಸ್ಪರ್ಧೆಗಳು ಗೋಪಾಲಸ್ವಾಮಿ ಶಿಶುವಿಹಾರ, ನಂಜುಮಳಿಗೆ, ಮೈಸೂರು,ಈ ವಿಳಾಸದಲ್ಲಿ ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್-
9916954433 ರಮಾಮಣಿ ಗುರುಪ್ರಸಾದ್
ಅವರನ್ನು ಸಂಪರ್ಕಿಸಬಹುದಾಗಿದೆ.
ವಯೋಮೀತಿ: 5 ವರ್ಷದಿಂದ 10 ವರ್ಷದವರೆಗೆ ಸಬ್ ಜೂನಿಯರ್.
10 ವರ್ಷದಿಂದ 16 ವರ್ಷದವರಗೆ ಜೂನಿಯರ್.
16 ವರ್ಷದಿಂದ 25 ವರ್ಷದವರೆಗೆ ಸೀನಿಯರ್.
25 ವರ್ಷದಿಂದ 35 ವರ್ಷದವರೆಗೆ ಸೂಪರ್ ಸೀನಿಯರ್.
ಭಜನಾಮಂಡಳಿಯವರಿಗೆ ವೃಂದಗಾಯನ, ಒಂದು ತಂಡದಿಂದ 5 ಜನರಿಗೆ ಮಾತ್ರ ಅವಕಾಶವಿರುತ್ತದೆ ಎಂದು ರಮಾಮಣಿ ತಿಳಿಸಿದ್ದಾರೆ.