ಮೈಸೂರು: ನಿಯತ್ತು,ಪ್ರೀತಿ ತೋರುವಲ್ಲಿ ಶ್ವಾನಗಳು ಮನುಷ್ಯ ರಿಗಿಂತ ಮೇಲು.ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಮೈಸೂರಿನ ಮೇಟಗಳ್ಳಿಯಲ್ಲಿ ಹುಚ್ಚುನಾಯಿ ಕಡಿದು ಮೃತಪಟ್ಟ ಮಹಾಲಿಂಗೇಶ್ವರ ದೇವಾಲಯದ ಬಸವನ ಅಂತ್ಯಕ್ರಿಯೆ ಮುಗಿಯುವ ತನಕ ಎರಡು ಶ್ವಾನಗಳು ಹಾಜರಿದ್ದು ಗೆಳೆತನದ ಪ್ರೀತಿಯನ್ನು ಮೆರೆದಿವೆ.
ನಿನ್ನೆ ಮಹಾಲಿಂಗೇಶ್ವರ ದೇವಾಲಯದ ಬಳಿ ಗ್ರಾಮದ ಬಸವನಿಗೆ ವಿಧಿವಿಧಾನದಿಂದ ಅಂತ್ಯಕ್ರಿಯೆ ನೆರವೇರಿಸಿ ಗ್ರಾಮಸ್ಥರು ಅಂತಿಮ ವಿದಾಯ ಹೇಳಿದರು.
ಈ ಎಲ್ಲಾ ಕಾರ್ಯ ದಲ್ಲೂ ಎರಡು ಶ್ವಾನಗಳು ಅಲ್ಲೇ ಇದ್ದು ಎಲ್ಲರ ಗಮನ ಸೆಳೆದವು.
ಮಹಾಲಿಂಗೇಶ್ವರನ ದೇವಾಲಯಕ್ಕೆ ಬಸವನನ್ನ ಮೀಸಲಿಡಲಾಗಿತ್ತು.ಬಸವನಿಗೆ ಮಹಾಲಿಂಗ ಎಂದೂ ಕರೆಯಲಾಗುತ್ತಿತ್ತು.
ಮಹಾಲಿಂಗನಿಗೆ ಬ್ಲ್ಯಾಕಿ ಮತ್ತು ಬ್ರೌನಿ ಎಂಬ ಎರಡು ಶ್ವಾನಗಳು ಗಳು ಗೆಳೆಯರಾಗಿದ್ದವು.ಮೂರೂ ಒಟ್ಟಾಗಿರುತ್ತಿದ್ದವು.
ಮಹಾಲಿಂಗ ಮೃತಪಟ್ಟ ನಂತರ ಈ ಎರೆಡೂ ಶ್ವಾನಗಳು ಕೊರಗುತಗುತ್ತಿದ್ದವು.ನಿನ್ನೆ ಮಹಾಲಿಂಗನ ಮೃತದೇಹವನ್ನ ಮೇಟಗಳ್ಳಿ ಹಾಗೂ ಬಿಎಂಶ್ರೀ ನಗರ ಬಡಾವಣೆಯಲ್ಲಿ ಮೆರವಣಿಗೆ ಮಾಡಿ ದೇವಾಲಯದ ಪಕ್ಕದಲ್ಲೇ ಜೆಸಿಬಿ ಮೂಲಕ ಗುಂಡಿ ತೆಗೆದು ಅಂತಿಮ ಕಾರ್ಯ ನೆರವೇರಿಸಲಾಯಿತು.
ಈ ಎಲ್ಲಾ ಕಾರ್ಯದ ವೇಳೆ ಬ್ಲಾಕಿ ಹಾಗೂ ಬ್ರೌನಿ ಅಲ್ಲೇ ಇದ್ದು ಮೂಕ ವೇದನೆ ಅನುಭವಿಸಿ ತಮ್ಮದೆ ರೀತಿ ವಿದಾಯ ಹೇಳಿದವು.ಇದನ್ನು ಕಂಡು ಅಲ್ಲಿ ನೆರದಿದ್ದವರೆಲ್ಲ ಭಾವುಕರಾದರು.