ಅತ್ಯಾಚಾರ:ಕಾನ್ಸ್​​ಟೇಬಲ್​ ವಿರುದ್ಧಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪ

Spread the love

ಡೆಹ್ರಾಡೂನ್​: ಉತ್ತರಾಖಂಡ ರಾಜಧಾನಿಯಲ್ಲಿ ಮಹಿಳಾ ಸಬ್​ ಇನ್ಸ್​​​​ಪೆಕ್ಟರ್ ಒಬ್ಬರು, ಕಾನ್ಸ್​ಟೇಬಲ್​ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ.

ಕಾನ್ಸ್​ಟೇಬಲ್​ ಖಾಸಗಿ ವಿಡಿಯೋಗಳನ್ನು ಮಾಡಿ ತನ್ನನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿರುವುದಾಗಿ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ​ದೂರಿದ್ದಾರೆ.

ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಡೆಹ್ರಾಡೂನ್​ ಪಟೇಲ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೊಲೀಸ್​ ಕಾನ್ಸ್​ಟೇಬಲ್​ ​ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ದೂರುದಾರ ಮಹಿಳಾ ಸಬ್​ ಇನ್ಸ್​​ಪೆಕ್ಟರ್​​ ಹೇಳಿಕೆಯನ್ನೂ ಮ್ಯಾಜಿಸ್ಟ್ರೇಟ್​ ಮುಂದೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಸಬ್​ ಇನ್ಸ್‌ಪೆಕ್ಟರ್ ರನ್ನು ಕೆಲವು ಸಮಯದ ಹಿಂದೆ ಗುಡ್ಡಗಾಡು ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ ಮಹಿಳಾ ಇನ್ಸ್​​ಪೆಕ್ಟರ್​ ವೈಯಕ್ತಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಬಯಲು ಜಿಲ್ಲೆಗೆ ವರ್ಗಾವಣೆ ಮಾಡಲು ವಿನಂತಿಸಿದ್ದರು. ನಂತರ ಪೊಲೀಸ್ ಇಲಾಖೆ ಅವರನ್ನು ಡೆಹ್ರಾಡೂನ್‌ನ ಒಂದು ಶಾಖೆಗೆ ವರ್ಗಾವಣೆ ಮಾಡಿತ್ತು.

ನಾನು ಹಾಗೂ ಆರೋಪಿ ಒಂದೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದೆವು. ಒಂದು ದಿನ ನಾನು ಕಚೇರಿಗೆ ಬರುವುದು ತಡವಾಗಿದ್ದು, ಅಧಿಕಾರಿಗಳು ವಿವರಣೆ ಕೇಳಿದ್ದರು. ಮನೆ ಕರ್ತವ್ಯ ಸ್ಥಳದಿಂದ ಬಹಳ ದೂರದಲ್ಲಿದೆ. ಮರುದಿನ ಕಚೇರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುವಂತೆ ನಗರದ ಒಂದು ಹೋಟೆಲ್​ನಲ್ಲಿ ತಂಗಲು ನಿರ್ಧರಿಸಿದ್ದೆ. ಎಲ್ಲಾ ಕಚೇರಿ ಕೆಲಸಗಳನ್ನು ಆರೋಪಿ ಕಾನ್ಸ್​​​ಟೇಬಲ್​​ ಮಾಡುತ್ತಿದ್ದರು. ಹಾಗಾಗಿಯೇ ನಾನು ಕೂಡ ಆರೋಪಿ ಕಾನ್ಸ್​​ಟೇಬಲ್​​​ಗೆ ಹೋಟೆಲ್‌ನಲ್ಲಿ ನನಗಾಗಿ ಒಂದು ಕೊಠಡಿ ಕಾಯ್ದಿರಿಸುವಂತೆ ಕೇಳಿದ್ದೆ”.

ಆರೋಪಿ ಕಾನ್ಸ್​ಟೇಬಲ್​ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದಾಗಿ ಹೇಳಿದ್ದ. ಕರ್ತವ್ಯ ಮುಗಿದ ನಂತರ, ಆರೋಪಿ ನನ್ನನ್ನು ಹೋಟೆಲ್‌ಗೆ ಕರೆದೊಯ್ದಿದ್ದು, ಕೊಠಡಿ ನೋಡುವ ನೆಪದಲ್ಲಿ ನನ್ನ ಕೋಣೆಗೆ ಬಂದಿದ್ದ. ಈ ವೇಳೆ ಆರೋಪಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅತ್ಯಾಚಾರದ ಸಮಯದಲ್ಲಿ ಆರೋಪಿ ವಿಡಿಯೋ ಮಾಡಿದ್ದು, ಯಾರಿಗಾದರೂ ಏನಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ನಂತರ ನಾನು ತುಂಬಾ ಭಯಭೀತಳಾಗಿದ್ದೆ.ಏಳು ದಿನ ರಜೆ ಹಾಕಿದೆ,ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದಾಗ, ಆರೋಪಿ ಕಾನ್ಸ್​ಟೇಬಲ್​ ಕಿರುಕುಳ ನೀಡಲು ಪ್ರಾರಂಭಿಸಿದ. ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ. ಕೊನೆಗೂ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದೇನೆ ನನಗೆ ನ್ಯಾಯ ಸಿಗಬೇಕು ಎಂದು ಮಹಿಳಾ ಸಬ್​ ಇನ್ಸ್​ಪೆಕ್ಟರ್​ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಡೆಹ್ರಾಡೂನ್​ ಎಸ್​ಎಸ್​ಪಿ ಅಜಯ್​ ಸಿಂಗ್​, ಸಂತ್ರಸ್ತೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ, ಆಕೆಯ ಹೇಳಿಕೆ ದಾಖಲಿಸಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರೊಂದಿಗೆ, ಗ್ರಾಮೀಣ ವಿಕಾಸನಗರ ಎಸ್ಪಿ ಕೂಡ ಈ ಪ್ರಕರಣದ ತನಿಖೆಯ ಮೇಲೆ ಗಮನ ಹರಿಸಿದ್ದಾರೆ ಎಂದು ತಿಳಿಸಿದ್ದಾರೆ.