ಮುಂಬೈ: ಬಾಲಿವುಡ್ ಖ್ಯಾತ ನಟ
ನಟ ಸೈಫ್ ಅಲಿ ಖಾನ್ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದ್ದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ಪಡೆದ ನಂತರ ಅಪಾಯದಿಂದ ಪಾರಾಗಿದ್ದಾರೆ ಎಂದು ಡಾ. ನಿತಿನ್ ಡಾಂಗೆ ಸ್ಪಷ್ಟ ಪಡಿಸಿದ್ದಾರೆ.
ಗುರುವಾರ ಮುಂಜಾನೆ ಸೈಫ್ ಅಲಿ ಖಾನ್ ಮನೆಯಲ್ಲಿ ವ್ಯಕ್ತಿಯೊಬ್ಬ ಚೂರಿಯಿಂದ ಹಲವು ಬಾರಿ ಮಾರಣಾಂತಿಕವಾಗಿ ಇರಿದಿದ್ದ.
ಆರು ಗಾಯಗಳಾಗಿದ್ದು 2 ಗಾಯಗಳು ಆಳವಾಗಿದ್ದು ಒಂದು ಗಾಯಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ,ಜತೆಗೆ ಪ್ಲಾಸ್ಟಿಕ್ ಸರ್ಜರಿ ಕೂಡಾ ಮಾಡಲಾಗಿದೆ ಸರ್ಜರಿಯ ನಂತರ ಸಾಯಿಫ್ ಚೇತರಿಸಿಕೊಳ್ಳುತ್ತಿದ್ದಾರೆ ಯಾವುದೇ ಅಪಾಯವಿಲ್ಲ ಎಂದು ಅವರಿಗೆಚಿಕಿತ್ಸೆ ನೀಡುತ್ತಿರುವ ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸಾಯಿಫ್ ಮೇಲಿನ ದಾಳಿಯಿಂದ ಇಡೀ ಬಾಲಿವುಡ್ ಬೆಚ್ಚಿಬಿದ್ದಿದೆ.