ಡಿಸೆಂಬರ್ 29 ರಂದು ಮೈಸೂರಿನಲ್ಲಿಸಿನಿ‌ ಸಂತೆ

Spread the love

ಮೈಸೂರು: ಡಿಸೆಂಬರ್ 29 ಮೈಸೂರು ನಗರದ ನಾಗರೀಕರಿಗೆ ವಿಶೇಷ ದಿನವಾಗಲಿದೆ.

ನಗರದ ಜೆ.ಕೆ.ಗ್ರೌಂಡ್ಸ್ ನಲ್ಲಿ
ಮೋಜು,ಮಸ್ತಿ,ರಂಜನೆಗೆ ವೇದಿಕೆ ಸಿದ್ದವಾಗುತ್ತಿದೆ.ಸಿನಿಮಾ ಮತ್ತು ಸಂಗೀತದ ಜತೆಗೆ ಫನ್ ಫುಡ್ ಎಲ್ಲವೂ ಇರಲಿದೆ.

ಇದು ಸಿನಿ ರಸಿಕರಿಗೊಂದು ಸುವರ್ಣ ಅವಕಾಶ ಕಲ್ಪಿಸಲಾಗಿದೆ,ತಾವು ನಿರ್ಮಿಸಿದ, ನಟಿಸಿದ, ನಿರ್ದೇಶಿಸಿದ ನಿಮ್ಮ ಸಿನಿಮಾಗಳನ್ನು ಇಲ್ಲಿಂದ ಉಚಿತವಾಗಿ ಪ್ರಮೋಷನ್ ಮಾಡಬಹುದಾಗಿದೆ.

ಅದಕ್ಕಾಗಿ ವೇದಿಕೆಯ ಹೆಸರನ್ನ ಸಿನಿ ಸಂತೆ ಎಂದು ಇಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 6364632425 ಸಂಪರ್ಕಿಸಬಹುದಾಗಿದೆ. ನಿಮ್ಮ ಚಿತ್ರಗಳನ್ನು ಜನರಿಗೆ ತಲುಪಿಸಲು ಇದು ಸಹಕಾರಿಯಾಗಲಿದೆ.

ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವುದರಿಂದ ಅದರ‌ ಭಾಗವಾಗಿ ಈ ಸಂತೆ ನಡೆಯುತ್ತದೆ ಎಂದು ಫೆಸ್ಟಿವಲ್ ಸಂಸ್ಥಾಪಕಿ ಹಾಗೂ ನಿರ್ದೇಶಕಿ ರಂಜಿತಾ ಸುಬ್ರಹ್ಮಣ್ಯ ತಿಳಿಸಿದ್ದಾರೆ.