ಮೈಸೂರು: ಮೈಸೂರಿನಲ್ಲಿ ಡಿಸೆಂಬರ್ 28 ರಂದು ಮೈಸೂರು ಹನುಮಂತೋತ್ಸವ ಸಮಿತಿ ವತಿಯಿಂದ ಹನುಮ ಹಬ್ಬ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಕಳೆದ ಐದು ವರ್ಷಗಳಿಂದ ಪಕ್ಷಾತೀತವಾಗಿ ಮಾಡಿಕೊಂಡು ಬರಲಾಗುತ್ತಿದ್ದು, ಡಿ. 28 ರಂದು 6 ನೆ ವರ್ಷದ ಹನುಮ ಹಬ್ಬ ವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಹನುಮಹಬ್ಬದ ಪೋಸ್ಟರ್ ಗಳನ್ನು ಪ್ರಮುಖ ನಾಯಕರುಗಳಿಂದ ಬಿಡುಗಡೆ ಮಾಡಿಸಲಾಗುತ್ತಿದೆ.
ಇಂದು ಸಂಜೆ ಜೆ ಡಿ ಎಸ್ ನಾಯಕರೂ,ಮಾಜಿ ಸಚಿವರಾದ ಸಾ.ರ ಮಹೇಶ್ ಅವರ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಡಿ. 28 ಶನಿವಾರ ಬೆಳಗ್ಗೆ 11 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರನೇ ವರ್ಷದ ಹನುಮ ಜಯಂತಿ ಶೋಭಾ ಯಾತ್ರೆ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ.
ಪೋಸ್ಟರ್ ಬಿಡುಗಡೆಯನ್ನು ಸಾ.ರ ಮಹೇಶ್ ಮಾಡಿದರು.ಈ ವೇಳೆ ಹನುಮಂತೋತ್ಸವ ಸಮಿತಿಯ ಪ್ರಮುಖರಾದ ಸಂಜಯ್, ಸಂತೋಷ್(ಶಂಭು ), ಎಸ್ ಪ್ರಕಾಶ್ ಪ್ರಿಯಾದರ್ಶನ್, ಹೇಮಂತ್, ಪ್ರಶಾಂತ್, ರಾಮು ಮತ್ತಿತರರು ಹಾಜರಿದ್ದರು.