ಮೈಸೂರು: ನಗರದ ಚಾಮುಂಡಿಪುರಂ ವೃತ್ತದಲ್ಲಿ ಜನಮನ ವೇದಿಕೆ, ಪಾತಿ ಫೌಂಡೇಶನ್ ಮತ್ತು ಅರಿವು ಸಂಸ್ಥೆ
ವತಿಯಿಂದ ಚಿನ್ನಸ್ವಾಮಿ ಸ್ಟೇಡಿಯಂ
ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಕ್ರಿಕೆಟ್ ಪ್ರೇಮಿಗಳ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಲಾಯಿತು.

ಈ ವೇಳೆ ನಗರಪಾಲಿಕೆ ಸದಸ್ಯ ಮಾ.ವಿ. ರಾಂಪ್ರಸಾದ್ ಅವರು ಮಾತನಾಡಿ ಐಪಿಎಲ್ ಪಂದ್ಯಾವಳಿಯಲ್ಲಿ ಅರ್.ಸಿ.ಬಿ ತಂಡ 18ವರ್ಷಗಳ ಬಳಿಕ ವಿಜೇರತರಾಗಿದ್ದನ್ನ ಸ್ವಾಗತಿಸುವ ಕಾರ್ಯಕ್ರಮ ಒಂದು ವಾರ ತಡವಾಗಿ ಆಯೋಜಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟರು.
ಒಂದು ಕಡೆ ಸಂಭ್ರಮಾಚರಣೆ ಇನ್ನೊಂದು ಕಡೆ ಶೋಕಾಚರಣೆ ಕ್ರಿಕೆಟ್ ಪ್ರೇಮಿಗಳಿಗೆ ನೋವನ್ನ ತಂದಿದೆ. ಅಭಿಮಾನ ಇರಬೇಕು ನಿಜ ಆದರೆ ಅಂದಾಭಿಮಾನ ಇರಬಾರದು ಎಂದು ಹೇಳಿದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗಕ್ಕೆ ನೋವನ್ನ ಬರುಸುವ ಶಕ್ತಿ ಧೈರ್ಯ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ವಿಧಾನಸೌಧದ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಷ್ಠಾಚಾರವಿಲ್ಲದೇ ಅನಾಮಿಕ ವ್ಯಕ್ತಿಗಳಲ್ಲ ಪೋಟೋ ತೆಗೆಸಿಕೊಂಡಿದ್ದಾರೆ, ರಾಜ್ಯ ಸರ್ಕಾರ ಬೇಜವ್ದಾರಿತನ ಆಯೋಜನೆ ಕಂಡು ಆರ್.ಸಿ.ಬಿ ಆಟಗಾರರಿಗೆ ಬಹುಶಃ ಬೇಸರ ತಂದಿರಬಹುದು ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 45ಸಾವಿರ ಮಂದಿ ಕೂರುವ ವ್ಯವಸ್ಥೆಯಿದ್ದಲ್ಲಿ ಏಕಾಏಕಿ ಲಕ್ಷಾಂತರ ಮಂದಿ ಕ್ರಿಕೆಟ್ ಪ್ರೇಮಿಗಳು ನುಗ್ಗಿದ್ದು ಕಾಲ್ತುಳಿತಕ್ಕೆ ಕಾರಣವಾಗಿದೆ ಮುಂದಿನ ದಿನದಲ್ಲಿ ಈ ತರಹ ಘಟನೆಗಳು ನಡೆಯದ ಹಾಗೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ಪಾತಿ ಫೌಂಡೇಶನ್ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ವಿಕ್ರಂ ಅಯ್ಯಂಗಾರ್, ಜೋಗಿ ಮಂಜು, ರಾಕೇಶ್ ಭಟ್, ಅಜಯ್ ಶಾಸ್ತ್ರಿ,ಕೆ ಎಂ ನಿಶಾಂತ್, ಮೈಸೂರು ಆನಂದ್, ದೂರ ರಾಜಣ್ಣ, ಜತ್ತಿ ಪ್ರಸಾದ್, ಶ್ರೀಕಾಂತ್ ಕಶ್ಯಪ್, ಸುಚೇಂದ್ರ, ಅರವಿಂದ, ಮಹದೇವ್, ರಾಘವೇಂದ್ರ, ಪುರುಷೋತ್ತಮ್, ಸೋಮೇಶ್, ಮಹೇಶ್, ಹವನ್ನು, ನಿರಂಜನ್, ಸುರೇಶ್, ರಾಕೇಶ್ ಮತ್ತಿತರರು ಭಾಗಿಯಾಗಿದ್ದರು.