ರಾಮಾನುಜ ರಸ್ತೆಯಲ್ಲಿ ರಾತ್ರಿ ಝಳಪಿಸಿದ ಲಾಂಗ್: ಆಟೋದಲ್ಲಿದ್ದವರ ಮೇಲೆ ಹಲ್ಲೆ

Spread the love

ಮೈಸೂರು: ಸಾಂಸ್ಕೃತಿಕ ನಗರಿ ಈಗ ಕ್ರೈಮ್ ನಗರಿ ಆಗಿಬಿಡುತ್ತಿದೆಯೇನೊ ಅನಿಸುತ್ತಿದೆ.ಇದಕ್ಕೆ ಇಂದು ರಾತ್ರಿ ನಡೆದ‌ ಒಂದು ಘಟನೆ ಸಾಕ್ಷಿಯಾಗಿದೆ.

ಮೈಸೂರಿನ ರಾಮಾನುಜ ರಸ್ತೆ 12 ಕ್ರಾಸ್ ಸಮೀಪ ಇನ್ನೂ ವಾಹನ ಸಂಚಾರ‌, ಜನ ಸಂಚಾರ ಇದ್ದಾಗಲೇ ಮಾರಕಾಸ್ತ್ರಗಳು ಸಾರ್ವಜನಿಕವಾಗಿ ರಾಜಾರೋಷವಾಗಿ ಝಳಪಿಸಿವೆ.

12 ನೆ ಕ್ರಾಸ್ ನಲ್ಲಿ ಮುಂದೆ ಹೋಗುತ್ತಿದ್ದ ಆಟೋವೊಂದನ್ನು ಹಿಂದಿನಿಂದ ಬಂದ ಕಾರ್ ನವರು ಅಡ್ಡಗಟ್ಟಿದ್ದಾರೆ.ಏಕಾಏಕಿ ಕಾರಿನಿಂದ ಇಳಿದ ಒಂದಿಬ್ಬರು ಪುರುಷರು ಆಟೋ ಮೇಲೆ ದಾಳಿ ಪ್ರಾರಂಭಿಸಿದ್ದಾರೆ.ತಕ್ಷಣ ಆಟೋ ಚಾಲಕ ಆತಂಕದಿಂದ ಇಳಿದು ಹೊರ ಬಂದು ನಿಲ್ಲುತ್ತಾರೆ.ಆದರೆ ಚಾಲಕನಿಗೆ ಆ ಪುರುಷರು ಏನೂ ಮಾಡಿಲ್ಲ.

ಆಟೊ ಒಳಗೆ ಇದ್ದವರ ಮೇಲೆ ಒಮ್ಮೆಗೆ ಲಾಂಗ್ ಗಳಿಂದ ಹಲ್ಲೆ ಮಾಡಿದ್ದಾರೆ.ಒಳಗಿದ್ದ ಮಹಿಳೆಯರು ಕೂಗಿಕೊಂಡರೂ ಬಿಡದೆ ಅವಾಚ್ಯ ಶಬ್ದ ಬಳಕೆ ಮಾಡಿ ಲಾಂಗ್ ಝಳಪಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿ ಪುರುಷರು ಪರಾರಿಯಾಗಿದ್ದಾರೆ.

ಇದನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದಾರೆ.

ಇದನ್ನೆಲ್ಲಾ ಸ್ಥಳದಲ್ಲಿದ್ದವರು ವಿಡಿಯೊ ಮಾಡಿ ಹಾಕಿದ್ದಾರೆ.ಈ ಘಟನೆ ಕೆ.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ,ಸಾರ್ವಜನಿಕ‌ ಸ್ಥಳಗಳಲ್ಲಿ ಇಂತಹ ಕೆಟ್ಟ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ.

ಸಾಂಸ್ಕೃತಿಕ ನಗರಿ ಕ್ರೈಮ್ ನಗರಿಯಾಗದಂತೆ ಮೈಸೂರು ಪೊಲೀಸ್ ಕಮಿಷನರ್ ಎಚ್ಚೆತ್ತು ಈಗಿನಿಂದಲೇ ಪುಂಡು,ಪೋಕರಿಗಳು,
ರೌಡಿಗಳಿಗೆ ತಿಳುವಳಿಕೆ ಮೂಡಿಸಿ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಲಿ.ಜನ ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿ.