ಕಾರಿನಲ್ಲಿ ಒಂದೇ ಕುಟುಂಬದ ಐದು ಮಂದಿಶವ ಪತ್ತೆ

ಚನ್ನೈ: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಹೆದ್ದಾರಿಯಲ್ಲಿ ರಸ್ತೆಬದಿ ನಿಂತಿದ್ದ ಕಾರಿನಲ್ಲಿ ಒಂದೇ ಕುಟುಂಬದ ಐದು ಮಂದಿ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ತಿರುಚ್ಚಿ-ಮದುರೈ ಹೆದ್ದಾರಿಯ ನವಸಮುತಿರಂ ಬಳಿ ಈ ಘಟನೆ ನಡೆದಿದ್ದು,
ವಾಚ್ ಮೆನ್ ಒಬ್ಬರು ಬಹಳ ಸಮಯದಿಂದ ಕಾರು ರಸ್ತೆ ಬದಿ ನಿಂತಿದ್ದನ್ನು ಕಂಡು ಅನುಮಾನದಿಂದ ಪರಿಶೀಲಿಸಿದಾಗ ಕಾರಿನಲ್ಲಿ ಐದು ಮಂದಿಯ ಶವ ಕಂಡು ಬಂದಿದ್ದು.

ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತರು ಸೇಲಂ ಮೂಲದ ಮಣಿಗಂದನ್, ಪತ್ನಿ ನಿತ್ಯಾ ಹಾಗೂ ಅವರ ಮನೆಯ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದವರು ಪುದುಕೊಟ್ಟೈಗೆ ಯಾಕೆ ಬಂದಿದ್ದರು ಎಂಬುದು ಗೊತ್ತಾಗಿಲ್ಲ, ವ್ಯಾಪಾರದಲ್ಲಿ ನಷ್ಟವುಂಟಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.