ದರ್ಶನ್ ಅಭಿಮಾನಿಗಳಿಂದ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ

ಮೈಸೂರು: ದರ್ಶನ್ ಅಭಿಮಾನಿಗಳು ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಡಿಸೆಂಬರ್ 11ರಿಂದ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ದರ್ಶನ್ ಅಭಿಮಾನಿಗಳ ಸಂಘದವರು ಹೂಟಗಳ್ಳಿಯಲ್ಲಿರುವ ಪಿ.ಜಿ.ಆರ್.ಎಸ್.ಎಸ್. ಆಶ್ರಯ ಕೇಂದ್ರ ಮತ್ತು ವೃದ್ಧರ ಬೃಂದಾವನನಲ್ಲಿ ವೃದ್ಧ ನಾಗರಿಕರಿಗೆ ಹೊದಿಕೆ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹೃದಯಸ್ಪರ್ಶಿ ಸೇವಾ ಕಾರ್ಯ ಮಾಡಿದರು.
ಚಿತ್ರ ಯಶಸ್ವಿಯಾಗಲಿ, ತಂಡದ ಮೇಲೆ ಹಿರಿಯ ನಾಗರಿಕರ ಆಶೀರ್ವಾದ ಇರಲಿ ಎಂಬ ಸಂಕಲ್ಪದೊಂದಿಗೆ ಈ ಸೇವಾ ಚಟುವಟಿಕೆಯನ್ನು ಆಯೋಜಿಸಿದ್ದರು.
ಹಿರಿಯ ನಾಗರಿಕರು ಆಶೀರ್ವಾದ ನೀಡಿ,
ಚಿತ್ರ ಹಿಟ್ ಆಗಲಿ, ದರ್ಶನ್ ಉತ್ತಮ ಗೆಲುವು ಕಾಣಲಿ ಎಂದು ಹಾರೈಸಿದರು.
ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್,ಕಡಕೋಳ ಜಗದೀಶ್,ಬೈರತಿ ಲಿಂಗರಾಜು,ರಕ್ತದಾನಿ ಮಂಜು,ಸಹನಗೌಡ,ಹರೀಶ್ ನಾಯ್ಡು,ಎಸ್ ಎನ್ ರಾಜೇಶ್,ರವಿಚಂದ್ರ,ರಾಕೇಶ್ ಸೇರಿದಂತೆ ಅನೇಕರು ಹಾಜರಿದ್ದರು.