ಮೈಸೂರು: ನವರಾತ್ರಿ ಸಂಭ್ರಮದಲ್ಲಿ ದಾಂಡಿಯಾ ನೃತ್ಯ ಪ್ರದರ್ಶಿಸುವುದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ಮನೋರೋಗ ತಜ್ಞರಾದ ಡಾ ರೇಖಾ ಮಾನಶಾಂತಿ ಹೇಳಿದರು.

ನಗರದ ಜೆ ಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ನಿಸರ್ಗ ಡ್ಯಾನ್ಸ್ ಅಕಾಡೆಮಿ ಹಾಗೂ ಧ್ವನಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ನಾಡ ಹಬ್ಬ ದಸರಾದ ಅಂಗವಾಗಿ ದಾಂಡಿಯಾ ನೃತ್ಯ ರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
9 ದಿನಗಳ ಕಾಲ ನಿರಂತರವಾಗಿ ನಾಡಿನ ಎಲ್ಲಾ ಜನರು ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಪ್ರಕೃತಿಯನ್ನು ಪೂಜಿಸಿ ಸರ್ವ ಶಕ್ತಿಯನ್ನು ದೇವೆ ನೀಡುವಂತಾಗಲಿ, ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ಪತ್ರಕರ್ತೆ ಸಹನಾಗೌಡ, ನಮಿಸು ಟ್ರಸ್ಟ್ ನ ಸಂತೋಷ್ ಗೌಡ, ರಶ್ಮಿ, ಪ್ರಿಯ ಮತ್ತಿತರರು ಉಪಸ್ಥಿತರಿದ್ದರು.
