ಅಮ್ಮನ ಕೊಂ*ದ ಪಾಪಿ‌ ಅಪ್ರಾಪ್ತ ಪುತ್ರಿ!

Spread the love

ಬೆಂಗಳೂರು: ತಾಯಿಯೇ ದೇವರು ಎಂದು ನಾವೆಲ್ಲ ಪೂಜಿಸುತ್ತೇವೆ,ಆದರೆ ಬೆಂಗಳೂರಿನಲ್ಲೊಬ್ಬಳು ಪಾಪಿ ಪುತ್ರಿ ತನ್ನನ್ನು ಹೆತ್ತ ಅಮ್ಮನನ್ನು ಕೊಂದಿದ್ದಾಳೆ!

ಅಪ್ರಾಪ್ತ ಮಗಳು ಸ್ನೇಹಿತರ ಜತೆ ಸೇರಿ ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಲೋನ್ ರಿಕವರಿ ಕಂಪನಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ನೇತ್ರಾವತಿ (35) ಕೊಲೆಯಾದ ತಾಯಿ.

ಸ್ನೇಹಿತರ ಜೊತೆ ಸೇರಿ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ‌ ನೇಣು ಹಾಕಿದ್ದಾಳೆ.

ಈ ಹೇಯ ಕೃತ್ಯದಲ್ಲಿ ಐವರು ಅಪ್ರಾಪ್ತರು ಭಾಗಿಯಾಗಿದ್ದಾರೆಂದು ಪೋಲೀಸರು ತಿಳಿಸಿದ್ದಾರೆ.

ಅ.25 ರಂದು ಈ ಘಟನೆ ನಡೆದಿದ್ದು ಕೊಲೆ ತಡವಾಗಿ ಗೊತ್ತಾಗಿದೆ.ಇದಕ್ಕೂ ಮೊದಲು ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಸಿಕೊಂಡಿದ್ದರು.

ನಂತರ ಕೊಲೆಯಾದ ನೇತ್ರಾವತಿ ಅವರ ಅಕ್ಕ ಅನಿತಾಗೆ ಮಗಳ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನೇತ್ರ ಸಾವಿನ ನಂತರ ಅವಳ ಮಗಳು ಎಲ್ಲೂ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ಎರಡು ದಿನಗಳ ಬಳಿಕ ಮಗಳು ವಾಪಸ್ ಮನೆಗೆ ಬಂದಿದ್ದಳು.

ಈ ಬಗ್ಗೆ ಅನಮಾನ ವ್ಯಕ್ತವಾದ ಹಿನ್ನಲೆ ನೇತ್ರಾವತಿಯ ಅಕ್ಕ ದೂರು ನೀಡಿದ್ದರು. ತನಿಖೆ ವೇಳೆ ಮಗಳಿಂದಲೇ ತಾಯಿ ಕೊಲೆಯಾಗಿದೆ ಎಂಬುದು ಬಯಲಾಗಿದೆ.

ಪುತ್ರಿ ಆಗಾಗ ಪ್ರಿಯತಮ ಮತ್ತು ‌ಸ್ನೇಹಿತರನ್ನು ಮನೆಗೆ ಕರೆತರುತ್ತಿದ್ದಳು.ಅದೇ ರೀತಿ‌ ಅಕ್ಟೋಬರ್ 25 ರಂದೂ
ಮನೆಗೆ ಸ್ನೇಹಿತರು ಬಂದಿದ್ದರು.

ಆಗ ನೇತ್ರಾವತಿ ಇದೆಲ್ಲ ಬೇಡ ಚೆನ್ನಾಗಿರುವುದಿಲ್ಲ ಎಂದು ಬೈದು ಬುದ್ದಿ ಹೇಳಿದ್ದಾರೆ. ಇದಕ್ಕೆ ಮಗಳು ಒಪ್ಪಿಲ್ಲ,ಆಗ ಪೊಲೀಸರಿಗೆ ಕರೆ ಮಾಡುವುದಾಗಿ ತಾಯಿ ಹೇಳಿದ್ದಾರೆ, ಆಗ ಪುತ್ರಿ ಸ್ನೇಹಿತರೊಂದಿಗೆ ಸೇರಿ ತಾಯಿಯ ಹತ್ಯೆ ಮಾಡಿದ್ದಾಳೆ.

ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.