ಮೈಸೂರು: ಚಾಮುಂಡಿಬೆಟ್ಟ ಹಿಂದುಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ
ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ವಿನಾಯಕ, ಗೌರಿ ಹಬ್ಬ ಆಚರಿಸುವ ವೇಳೆ ಡಿ.ಕೆ.ಶಿವಕುಮಾರ್ ಅವರ ಇಂತಹ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ ಎಂದು ತಿಳಿಸಿದರು.
ಸಾವಿರಾರು ವರ್ಷಗಳ ಹಿಂದೆ ಮರ್ಕಂಡೇಯ ತಪಸ್ಸು ಮಾಡಿದ್ದ ಸ್ಥಳ ಅದು, ಸಾವಿರಾರು ವರ್ಷಗಳಿಂದ ಚಾಮುಂಡಿ ಬೆಟ್ಟ ಇರುವುದು ಕೂಡ ಉಲ್ಲೇಖ ಇದೆ ಚಾಮುಂಡಿಬೆಟ್ಟಕ್ಕೆ ಎಲ್ಲರಿಗೂ ಪ್ರವೇಶವಿದೆ. ಅದು ಧಾರ್ಮಿಕ ಸ್ಥಳವಾಗಿರುವ ಕಾರಣ ಎಲ್ಲರೂ ಹೋಗಬಹುದು ಎಂದು ಹೇಳಿದರು.
ಆಧುನಿಕ ಕಾಲಘಟ್ಟದಲ್ಲಿ ಜಾತ್ಯಾತೀತ ದೃಷ್ಟಿಕೋನದಿಂದ ನೋಡಬಹುದು, ಲಕ್ಷಾಂತರ ಜನರ ಭಾವನೆಗೆ ಧಕ್ಕೆ ಉಂಟಾಗಿದೆ.ಧರ್ಮ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇವೆ,ಜತೆಗೆ ಕಾನೂನು ಚೌಕಟ್ಟಿನಲ್ಲೂ ಹೋರಾಡುತ್ತೇವೆ, ನಾವು ಎಲ್ಲ ಧರ್ಮ ಒಪ್ಪಿಕೊಳ್ಳುತ್ತೇವೆ ಹಾಗಂತ ಒಂದು ಧರ್ಮದ ಓಲೈಕೆಗೆ ಮುಂದಾಗಬಾರದು ಎಂದು ತಿಳಿಸಿದರು.
ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ, ಅವುಗಳನ್ನ ಮುಚ್ಚಿ ಹಾಕಲು ಇಂತಹ ಹೇಳಿಕೆ ಸರಿಯಲ್ಲಾ ಎಂದು ಹೇಳಿದರು.
ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಇದೇ ಕಾಂಗ್ರೆಸ್ ಸರ್ಕಾರ, ಬೆಟ್ಟವನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅವರ ಹುನ್ನಾರ. ಬರೀ ಹಿಂದೂ ದೇವಾಲಯಗಳನ್ನ ತೆಗೆದುಕೊಳ್ಳುತ್ತಾರೆ, ಬೆಂಗಳೂರಿನ ಆಂಜನೇಯ ದೇವಸ್ಥಾನವನ್ನೂ ಹಾಗೆ ಮಾಡಿದರು ಯಾವಾಗಲೂ ಹಿಂದುಗಳಿಗೆ ವಿರುದ್ಧದ ಹೇಳಿಕೆ ನೀಡುತ್ತಿದ್ದಾರೆ ಎಂದು ಯದುವೀರ್ ಬೇಸರ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಅವರು ಆರ್ ಎಸ್ ಎಸ್ ಹಾಡು ಹಾಡಿ ಜಾಗೃತಿ ಎಂದು ಹೇಳಿ ಬಳಿಕ ಸ್ವಪಕ್ಷದವರ ವಿರೋಧಕ್ಕೇ ಗುರಿಯಾದರು. ಅದನ್ನ ಸಮತೋಲನಕ್ಕೆ ತರಲು ಕ್ಷಮೆ ಯಾಚಿಸಿದರು. ಪಕ್ಷಕ್ಕಾಗಿ, ಕಾರ್ಯಕರ್ತರಿಗಾಗಿ ಇಂತಹ ಹೇಳಿಕೆ ನೀಡಿರಬಹುದು ಎಂದು ಯದುವೀರ್ ವಿಶ್ಲೇಷಿಸಿದರು.
ಯಾವುದಾದರೂ ವಿಷಯ ಇದ್ದಾಗ ಡೈವರ್ಟ್ ಮಾಡಲು ಕಾಂಗ್ರೆಸ್ ನವರು ಏನೇನೊ ಹೇಳಿಕೆ ನೀಡುತ್ತಾರೆ ಎಂದು ಆಕ್ಷೇಪಿಸಿದರು.
ಚಾಮುಂಡಿ ಬೆಟ್ಟ ಧಾರ್ಮಿಕ ಸ್ಥಳ,ಬೆಟ್ಟ ಹಿಂದುಗಳ ಆಸ್ತಿ, ಅದು ಎಂದೆಂದಿಗೂ ಹಿಂದುಗಳ ಆಸ್ತಿ ಆಗಿರುತ್ತದೆ ಉಪಮುಖ್ಯಮಂತ್ರಿಗಳ ಹೇಳಿಕೆಯಿಂದ ಏನೂ ಬದಲಾವಣೆ ಆಗಲಾರದು ಎಂದು ಯದುವೀರ್ ಒಡೆಯರ್ ಟಾಂಗ್ ನೀಡಿದರು.